Bigg Boss: ಬಿಗ್ ಬಾಸ್ ಕನ್ನಡ, ಮಲಯಾಳಂ ಸೇರಿ ಎಲ್ಲಾ ಭಾಷೆಗಳ ಶೋನಲ್ಲಿ ಯಾವುದಕ್ಕೆ ಗರಿಷ್ಠ ರೇಟಿಂಗ್?

Share the Article

Bigg Boss: ಬಿಗ್ ಬಾಸ್ (Bigg Boss) ಕನ್ನಡ, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಈ ಬಾರಿಯ ಕನ್ನಡ ಬಿಗ್ ಬಾಸ್ ಎರಡು ದಿನ ಸ್ಥಗಿತಗೊಂಡು ಭಾರಿ ಹೈಡ್ರಾಮವೇ ನಡೆದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಬಿಗ್ ಬಾಸ್ ರೇಟಿಂಗ್ ಬಹಿರಂಗವಾಗಿದೆ.

ಬಿಗ್ ಬಾಸ್ ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಿದರೆ ಬಿಗ್ ಬಾಸ್ ಮಲೆಯಾಳಂ ನಂ.1 ರೇಟಿಂಗ್ ಪಡೆದುಕೊಂಡಿದೆ. ಸೂಪರ್ ಸ್ಟಾರ್ ಮೋಹನ್‌ಲಾಲ್ ನಡೆಸಿಕೊಡುವ ಮಲೆಯಾಳಂ ಬಿಗ್ ಬಾಸ್ 12.1 ರೇಟಿಂಗ್ ಪಡೆದಿದೆ. ಇನ್ನು ತೆಲುಗು ಬಿಗ್ ಬಾಸ್ 2ನೇ ಸ್ಥಾನದಲ್ಲಿದ್ದರೆ ಕನ್ನಡ ಮೂರನೇ ಸ್ಥಾನದಲ್ಲಿದೆ. ಇನ್ನು ಕೊನೆಯ ಸ್ಥಾನದಲ್ಲಿರುವುದು ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ.

ಬಿಗ್ ಬಾಸ್ ಶೋ ರೇಟಿಂಗ್

ಬಿಗ್ ಬಾಸ್ ಮಲೆಯಾಳಂ : 12.1 ರೇಟಿಂಗ್

ಬಿಗ್ ಬಾಸ್ ತೆಲುಗು :11.1 ರೇಟಿಂಗ್

ಬಿಗ್ ಬಾಸ್ ಕನ್ನಡ : 7.4 ರೇಟಿಂಗ್ (ವಾರಾಂತ್ಯ 10.9)

ಬಿಗ್ ಬಾಸ್ ತಮಿಳು : 5.6 ರೇಟಿಂಗ್

ಬಿಗ್ ಬಾಸ್ ಹಿಂದಿ : 1.3 ರೇಟಿಂಗ್

Comments are closed.