RBI ನಿಂದ ‘ಡಿಜಿಟಲ್ ಕರೆನ್ಸಿ’ ಬಿಡುಗಡೆ !! ಈ ಡಿಜಿಟಲ್ ರೂಪಾಯಿ ಅಂದರೆ ಏನು?


RBI: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದ್ದು ಇಂಟರ್ನೆಟ್ ಇಲ್ಲದೆ ಪಾವತಿ ಮಾಡುವುದು ಇದರ ವಿಶೇಷತೆಯಾಗಿದೆ.
ಹೌದು, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮುಂಬೈನ ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಮಹತ್ವದ ‘ಆಫ್ಲೈನ್ ಡಿಜಿಟಲ್ ರೂಪಾಯಿ’ (e₹) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
ಡಿಜಿಟಲ್ ರೂಪಾಯಿ ಎಂದರೇನು?
ಡಿಜಿಟಲ್ ರೂಪಾಯಿ, ಅಥವಾ e₹, ಭಾರತದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC). ನೀವು ಇದನ್ನು ಭಾರತೀಯ ರೂಪಾಯಿಯ ಡಿಜಿಟಲ್ ಆವೃತ್ತಿ ಎಂದೂ ಕರೆಯಬಹುದು. ಇಂಟರ್ನೆಟ್ ಪ್ರವೇಶವಿಲ್ಲದೆಯೂ ಸಹ ನೀವು ಡಿಜಿಟಲ್ ರೂಪಾಯಿಯನ್ನು ಬಳಸಬಹುದು. ಉದಾಹರಣೆಗೆ, ಈ ಡಿಜಿಟಲ್ ರೂಪಾಯಿ ನಿಮ್ಮ ವ್ಯಾಲೆಟ್ನಲ್ಲಿರುವ ನಗದನ್ನು ಹೋಲುತ್ತದೆ. ಒಂದೇ ವ್ಯತ್ಯಾಸವೆಂದರೆ ಅದು ಡಿಜಿಟಲ್ ರೂಪದಲ್ಲಿ ಲಭ್ಯವಿದೆ.
ನಿಮ್ಮ ಡಿಜಿಟಲ್ ವ್ಯಾಲೆಟ್’ನಲ್ಲಿ ಸಂಗ್ರಹಿಸುವ ಮೂಲಕ ನೀವು ಅದನ್ನು ಆಫ್ಲೈನ್’ನಲ್ಲಿ ಬಳಸಬಹುದು. ಇದಲ್ಲದೆ, ಪ್ರತಿ ವಹಿವಾಟಿಗೆ ನಿಮ್ಮ ಬ್ಯಾಂಕ್ ಖಾತೆಗೆ ಪ್ರವೇಶವನ್ನು ಹೊಂದಿರಬೇಕಾಗಿಲ್ಲ. ಬಳಕೆದಾರರು ಈ ಅಪ್ಲಿಕೇಶನ್’ಗಳನ್ನು Google Play Store ಅಥವಾ Apple Play Store ನಿಂದ ಡೌನ್ಲೋಡ್ ಮಾಡಬಹುದು. ನೋಂದಾಯಿಸಿದ ನಂತರ, ನೀವು ಯಾವುದೇ ವ್ಯಕ್ತಿ ಅಥವಾ ವ್ಯವಹಾರಕ್ಕೆ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಈ ಡಿಜಿಟಲ್ ರೂಪಾಯಿಯನ್ನು ಈಗಾಗಲೇ ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಆಯಕ್ಸಿಸ್, ಕೆನೆರಾ, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಇನ್ನಿತರ ಬ್ಯಾಂಕ್ಗಳು ಇದನ್ನು ಅಳವಡಿಸಿಕೊಂಡಿವೆ. ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಡಿಜಿಟಲ್ ರೂಪಾಯಿಯಾಗಿ ಬದಲಾವಣೆ ಮಾಡಿಕೊಂಡು ಬಳಕೆ ಮಾಡಬಹುದು. ಬೇರೆ ಅವರ ಖಾತೆಯಿಂದಲೂ ನಾವು ಹಣವನ್ನು ಶೇರ್ ಮಾಡಿಕೊಳ್ಳಬಹುದು. ಬ್ಯಾಂಕ್ ಖಾತೆಗೂ ವರ್ಗಾಯಿಸಬಹುದು.
Comments are closed.