Udupi: ಅಣ್ಣ ತಂಗಿ ನೇಣು ಬಿಗಿದು ಆತ್ಮಹತ್ಯೆ

Udupi: ಅಣ್ಣ-ತಂಗಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯದಲ್ಲಿ ನಡೆದಿದೆ.

ಮಲ್ಲೇಶ್ ಹಾಗೂ ಪವಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆ ಕೆಲಸಗಳಿಗೆ ಹೋಗುತ್ತಿದ್ದ ಪವಿತ್ರಾ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಳು. ಮಹೇಶ್ ಹಾಗೂ ಪವಿತ್ರಾ ದೊಡ್ಡಮ್ಮ-ಚಿಕ್ಕಮ್ಮನ ಮಕ್ಕಳೆಂದು ವರದಿಯಾಗಿದೆ.
ಮಲ್ಲೇಶ್ ಉಡುಪಿಯಲ್ಲಿ ಗಾರೆ ಕೆಲಸ ಮಾಡುತಿದ್ದ, ಈತ ವಾರದ ಹಿಂದಷ್ಟೇ ಚಿಕ್ಕಮ್ಮನ ಮನೆಗೆ ಬಂದಿದ್ದ. ಹನುಮವ್ವ ರಾಯಚೂರಿಗೆ ಹೋಗಿದ್ದು, ಅಲ್ಲಿಂದ ವಾಪಸು ಬರುವಷ್ಟರಲ್ಲಿ ಅಣ್ಣ ತಂಗಿ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.