Home News Rivaba Jadeja: ಗುಜರಾತ್‌ ಸಂಪುಟ ಪುನಾರಚನೆ: ಜಡೇಜಾ ಪತ್ನಿ ರಿವಾಬಾಗೆ ಮಿನಿಸ್ಟರ್‌ ಸ್ಥಾನ

Rivaba Jadeja: ಗುಜರಾತ್‌ ಸಂಪುಟ ಪುನಾರಚನೆ: ಜಡೇಜಾ ಪತ್ನಿ ರಿವಾಬಾಗೆ ಮಿನಿಸ್ಟರ್‌ ಸ್ಥಾನ

Hindu neighbor gifts plot of land

Hindu neighbour gifts land to Muslim journalist

 

Rivaba Jadeja: ಭೂಪೇಂದ್ರ ಪಟೇಲ್‌ (Bhupendra Patel) ಸಂಪುಟದ 16 ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಗುಜರಾತ್‌ನಲ್ಲಿಂದು (Gujarat) ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಹರ್ಷ ಸಾಂಘ್ವಿ (Harsh Sanghavi) ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ (Rivaba Jadeja) ಸೇರಿ 26 ಸಚಿವರೂ ಪ್ರಮಾಣ ಸ್ವೀಕಾರ ಮಾಡಿದರು.

ಸಮುದಾಯವಾರು ನಾಯಕರ ಪಟ್ಟಿ

* ಪಾಟಿದಾರ್ ಸಮುದಾಯದಿಂದ: ಕೌಶಿಕ್ ವೆಕಾರಿಯಾ, ಪ್ರಫುಲ್ ಪನ್ಸಾರಿಯಾ, ಕಾಂತಿ ಅಮೃತಿಯಾ, ರಿಷಿಕೇಶ್ ಪಟೇಲ್, ಜಿತುಭಾಯ್ ವಘಾನಿ ಮತ್ತು ಕಮಲೇಶ್ ಪಟೇಲ್.

* ಪರಿಶಿಷ್ಟ ಜಾತಿಯಿಂದ: ಮನೀಶಾ ವಕೀಲ್, ಪ್ರದ್ಯುಮ್ನ ವಾಜಾ ಮತ್ತು ದರ್ಶನ್ ವಘೇಲಾ.

* ಆದಿವಾಸಿ ಸಮುದಾಯದಿಂದ: ರಮೇಶ ಕಾಟಾರ, ಪಿ.ಸಿ. ಬರಂದ, ಜೈರಾಮ್ ಗಮಿತ್ ಮತ್ತು ನರೇಶ್ ಪಟೇಲ್.

* ಕ್ಷತ್ರಿಯ ಸಮುದಾಯದಿಂದ: ರಿವಾಬಾ ಜಡೇಜಾ ಮತ್ತು ಸಂಜಯ್‌ಸಿನ್ಹ್ ಮಹಿದಾ.

* ಒಬಿಸಿ ಸಮುದಾಯದಿಂದ: ಕುನ್ವರ್ಜಿ ಬವಲಿಯಾ, ಅರ್ಜುನ್ ಮೊದ್ವಾಡಿಯಾ, ಪರ್ಷೋತ್ತಮ್ ಸೋಲಂಕಿ, ತ್ರಿಕಮ್ ಛಂಗಾ, ಪ್ರವೀಣ್ ಮಾಲಿ, ಸ್ವರೂಪ್ಜಿ ಠಾಕೋರ್, ಈಶ್ವರಸಿನ್ಹ್ ಪಟೇಲ್ ಮತ್ತು ರಾಮನ್ ಸೋಲಂಕಿ.

* ಬ್ರಾಹ್ಮಣ ಸಮುದಾಯದಿಂದ: ಕನುಭಾಯಿ ದೇಸಾಯಿ

* ಜೈನ (ಲಘುಮತಿ) ಸಮುದಾಯದಿಂದ: ಹರ್ಷ ಸಾಂಘ್ವಿ