KMF: ಡಯಾಬಿಟಿಕ್‌ ಪೇಷೆಂಟ್‌ಗಳಿಗೆ ಕೆಎಂಎಫ್‌ ಸಿಹಿ ಸುದ್ದಿ, ಸಿಗಲಿದೆ ಶುಗರ್‌ ಫ್ರೀ ಸ್ವೀಟ್ಸ್‌

Share the Article

KMF: ಡಯಾಬಿಟಿಸ್‌ ಇರುವವರಿಗೆ ಕೆಎಂಎಫ್‌ ದೀಪಾವಳಿ ಉಡುಗೊರೆ ನೀಡಿದ್ದು, ನಂದಿನಿ ಬ್ರ್ಯಾಂಡ್‌ನಲ್ಲಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯ ಕಾಳಜಿಯ ಕಾರಣ ಹಬ್ಬದಲ್ಲಿ ಉತ್ಪನ್ನಗಳಿಗೆ ಬೇಡಿಕೆಗೆ ಪೂರಕವಾಗಿ ನಂದಿನಿ ಶುಗರ್‌ ಫ್ರೀ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.

ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್‌ ಜಾಮೂನ್‌ 500 ಗ್ರಾಂ ಪ್ಯಾಕ್‌ಗೆ ರೂ.220, ಶುದ್ಧ ನಂದಿನಿ ಹಳೆ ಪೇಡಾ (ಸಕ್ಕರೆ ರಹಿತ) 200 ಗ್ರಾಂಗೆ ರೂ.170 ಮತ್ತು ಬೆಲ್ಲದಿಂದ ತಯಾರಿಸಿದ ನಂದಿನಿ ಬೆಲ್ಲ ಓಟ್ಸ್‌ ಮತ್ತು ಬೀಜಗಳ ಬರ್ಫಿ 200 ಗ್ರಾಂ ಗೆ 170 ರೂ. ಬೆಲೆಗೆ ಲಭ್ಯವಿದೆ ಎಂದು ಕೆಎಂಎಫ್‌ ತಿಳಿಸಿದೆ.

 

Comments are closed.