PhonePe: ನಿಮಗೆ ಗೊತ್ತಿಲ್ಲದೆ ಫೋನ್ ಪೇ ಯಿಂದ ಕಟ್ ಆಗುತ್ತೆ ಹಣ – ತಡೆಯುವುದು ಹೇಗೆಂದು ನೋಡಿ, ಬೇಗ ಸ್ಟಾಪ್ ಮಾಡಿ

Share the Article

 

Phone Pay : ಇಂದು ದೇಶಾದ್ಯಂತ ಹೆಚ್ಚಿನವರು ಯುಪಿಐ ಪೇಮೆಂಟ್ಗಳನ್ನು ಬಳಸುತ್ತಾರೆ. ಅದರಲ್ಲಿ ಫೋನ್ ಪೇ ಬಳಕೆದಾರರೇ ಹೆಚ್ಚು. ಹೀಗಾಗಿ ಹ್ಯಾಕರ್ಸ್ ಗಳು ಫೋನ್ ಪೇ ಮುಖಾಂತರ ಜನರ ಬಳಿಯಿಂದ ಅವರಿಗೆ ತಿಳಿಯದಂತೆ ದುಡ್ಡು ಕದಿಯುತ್ತಾರೆ. ಇದರಿಂದಾಗಿ ಫೋನ್ ಪೇ ಬಳಕೆದಾರರಿಗೆ ಗೊತ್ತಿಲ್ಲದಂತೆ ತಮ್ಮ ಖಾತೆಯಿಂದ ಅಮೌಂಟ್ ಕಟ್ಟಾಗುತ್ತದೆ. ಹಾಗಾದ್ರೆ ಇದನ್ನು ತಡೆಯುವುದು ಹೇಗೆ? ನಾವು ಹೇಳುವುದನ್ನು ನೋಡಿ, ಬೇಗ ಸ್ಟಾಪ್ ಮಾಡಿ.

 

ಹೌದು, ನೀವು ಫೋನ್‌ ಪೇ ಬಳಕೆ ಮಾಡುತ್ತಿದ್ದರೆ ಎಚ್ಚರಿಕೆ ವಹಿಸಿ. ಫೋನ್‌ಪೇನಲ್ಲಿ ಲಭ್ಯ ಇರುವ ಆಟೋ ಪೇ ಈ ಸ್ಕ್ಯಾಮ್‌ ನಡೆಯುತ್ತದೆ. ಸ್ಕ್ಯಾಮ್‌ನಲ್ಲಿ, ಹ್ಯಾಕರ್‌ಗಳು ನಿಮಗೆ ನಿಜವಾದಂತೆ ಕಾಣುವ ನಕಲಿ ಪಾವತಿ ವಿನಂತಿಯನ್ನು ಕಳುಹಿಸುತ್ತಾರೆ ಮತ್ತು ನೀವು ಅದನ್ನು ಅನುಮೋದಿಸಿದಾಗ, ನಿಮ್ಮ ಖಾತೆಯಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಇದು ಒಂದು ವಂಚನೆಯಾಗಿದೆ.

 

 ಹೇಗೆ ನಡೆಯುತ್ತೆ ವಂಚನೆ?

ಸ್ಕ್ಯಾಮರ್‌ಗಳು ನಿಮಗೆ ಹಣವನ್ನು ಪಾವತಿಸುವುದಾಗಿ ಹೇಳಿಕೊಂಡು ನಕಲಿ ಪಾವತಿ ರಿಕ್ವೆಸ್ಟ್ ಅಥವಾ ಲಿಂಕ್ ಅನ್ನು ಕಳುಹಿಸುತ್ತಾರೆ. ನೀವು ಆ ರಿಕ್ವೆಸ್ಟ್ ಅನ್ನು ಸ್ವೀಕರಿಸಿದಾಗ, ನೀವು ತಿಳಿಯದೆ ಆಟೋ-ಪೇ ಅನ್ನು ಸಕ್ರಿಯಗೊಳಿಸುತ್ತೀರಿ. ಇದರರ್ಥ ಭವಿಷ್ಯದಲ್ಲಿ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ.

 

ಹಾಗಿದ್ರೆ ಈ ಆಟೋಪೇ ರದ್ದು ಮಾಡುವುದು ಹೇಗೆ?

ಮೊದಲು ಫೋನ್‌ ಪೇ ಓಪನ್‌ ಮಾಡಿ.

ನಂತರ ಎಡ ಮೂಲೆಯಲ್ಲಿ ಕಾಣುವ ನಿಮ್ಮ ಪ್ರೊಫೈಲ್‌ ಮೇಲೆ ಕ್ಲಿಕ್‌ ಮಾಡಿ .

ಬಳಿಕ ಸ್ವಲ್ಪ ಕೆಳಗೆ ಬಂದು ಅಲ್ಲಿ ಆಟೋ ಪೇ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಬಳಿಕ ಆನ್‌ಗೋಯಿಂಗ್‌ ವಿಭಾಗದಲ್ಲಿ ಯಾವುದಾದರೂ ಲಿಸ್ಟ್‌ ಇದೆಯಾ ಗಮನಿಸಿ.

ಇದ್ದರೆ ಅದರ ಮೇಲೆ ಕ್ಲಿಕ್‌ ಮಾಡಿ ರಿಮೂವ್‌ ಮಾಡಿ.

Comments are closed.