E-cigarettes: ಇ ಸಿಗರೇಟ್ ಅಂದ್ರೆ ಏನು?

E-cigarettes: ಇ-ಸಿಗರೇಟ್ (e-cigarettes) ಅಂದ್ರೆ ಏನು. ಇದರ ಕ್ರೇಜ್ ಹೇಗಿರುತ್ತೆ? ಇದೆಷ್ಟು ಅಪಾಯಕಾರಿ ಅನ್ನೋ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

ಇ-ಸಿಗರೇಟ್ ಅಂದ್ರೆ ಏನು?
ನಿಕೋಟಿನ್ ಅಂಶವನ್ನು ಹೊಂದಿರುವ ಈ ಸಿಗರೇಟ್ ಹಾನಿಕಾರಕ ಹೊಗೆಯಿಂದ ಕೂಡಿರುತ್ತದೆ. ಇದು ಸಾಮಾನ್ಯವಾದ ಸಿಗರೇಟ್ ಗಳಿಂದ ವಿಭಿನ್ನವಾಗಿದೆ. ಆದರೂ, ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರ ಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
ಇ-ಸಿಗರೇಟ್ ಕ್ರೇಜ್ ಹೇಗಿದೆ?
ಬೆಂಗಳೂರು ಹೈದರಾಬಾದ್ ಮುಂಬೈ, ಕಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಡ್ರಗ್ಸ್ ಗಾಂಜಾ ಜೊತೆಗೆ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿರುವ ಈ ಸಿಗರೇಟ್ ಕೂಡ ಯುವ ಜನತೆಯನ್ನು ಹಾಳು ಮಾಡುತ್ತಿದೆ. ಇ ಸಿಗರೇಟ್ ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್ ಇ-ಸಿಗಾರ್, ಇ-ಪೈಪ್ ಎಂಬ ಹೆಸರುಗಳಿಂದ ಕರೆಯುತ್ತಾರೆ. E-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ, ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳ ಸೂಸುವಂತಹ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
2019ರಲ್ಲೇ ಇ-ಸಿಗರೇಟ್ ಬಳಕೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು. 2022ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 18 ರಿಂದ 30 ವರ್ಷ ವಯಸ್ಸಿನ 23% ಶಿಕ್ಷಿತರು ಇ-ಸಿಗರೇಟ್ ಬಳಕೆ ಮಾಡ್ತಿದ್ದಾರೆ. ದೇಶದ ಶೇ.8 ರಷ್ಟು ಜನ ಮಾತ್ರ ದಿನನಿತ್ಯ ಇ-ಸಿಗರೇಟ್ ಬಳಕೆ ಮಾಡ್ತಿದ್ದಾರೆ. ಈ ಪ್ರಮಾಣ 2025ರಲ್ಲಿ ಬಹಳಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ.
ಇತ್ತೀಚೆಗೆ ಮಂಗಳೂರಿನ ಲಾಲ್ಬಾಗ್ನಲ್ಲಿರುವ ಕಾಂಪ್ಲೆಕ್ಸ್ವೊಂದರ ಅಂಗಡಿಯಲ್ಲಿ ಇ-ಸಿಗರೇಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಿಶ್ವಾದ್ಯಂತ 13 ರಿಂದ 15 ವರ್ಷ ವಯಸ್ಸಿನ ಸುಮಾರು 15 ಲಕ್ಷ ಮಕ್ಕಳು ಇ-ಸಿಗರೇಟ್ ಬಳಸುತ್ತಿದ್ದಾರೆ. ಇದು ವಯಸ್ಕರಿಗಿಂತ 9% ಹೆಚ್ಚಾಗಿದೆ. ಹೀಗಾಗಿ, 91 ಲಕ್ಷ ಪುರುಷರು, 56 ಲಕ್ಷ ಹುಡುಗಿಯರು ಇ-ಸಿಗರೇಟ್ ಸೇದುತ್ತಿದ್ದಾರೆ. ಅಮೆರಿಕದಲ್ಲಿ 40% ಜನರು ತಿಂಗಳಿಗೆ 20 ಅಥವಾ ಅದಕ್ಕಿಂತಲೂ ಹೆಚ್ಚಿನ ದಿನಗಳಲ್ಲಿ ಇ-ಸಿಗರೇಟ್ ಬಳಸುತ್ತಿದ್ದಾರೆ ಎಂಬ ಮಾಹಿತಿಯಿದೆ.
Comments are closed.