Home Crime Davanagere: ಶ್ರೀರಾಮ, ಚಾಮುಂಡೇಶ್ವರಿ ಫ್ಲೆಕ್ಸ್‌ ವಿರೂಪ: ಐವರ ಬಂಧನ

Davanagere: ಶ್ರೀರಾಮ, ಚಾಮುಂಡೇಶ್ವರಿ ಫ್ಲೆಕ್ಸ್‌ ವಿರೂಪ: ಐವರ ಬಂಧನ

Crime

Hindu neighbor gifts plot of land

Hindu neighbour gifts land to Muslim journalist

Davanagere: ವಿಜಯದಶಮಿ ಹಬ್ಬದಂದು ದಾವಣಗೆರೆಯ ಬೇತೂರು ರಸ್ತೆಯಲ್ಲಿ ಭಕ್ತರು ಹಾಕಿದ್ದ ಶ್ರೀರಾಮ ಮತ್ತು ಚಾಮುಂಡೇಶ್ವರಿ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ವಿರೂಪ ಮಾಡಿದ ಆರೋಪದಲ್ಲಿ ಐವರು ಅನ್ಯಕೋಮಿನ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಮುಕ್ತಿಯಾರ್‌, ಆಬೀದ್‌, ಆತಿಕ್‌, ಸಾಧಿಕ್‌, ಅಮಾನುಲ್ಲ ಎಂದು ಗುರುತಿಸಲಾಗಿದೆ.

ಅ.3 ರಂದು ವಿಜಯದಶಮಿಯ ಕಾರಣ ದಾವಣಗೆರೆಯಲ್ಲಿ ಅದ್ಧೂರಿ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು. ಅಲ್ಲಲ್ಲಿ ದೇವರ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಆದರೆ ಇಮಾಂ ನಗರದ 5 ನೇ ಕ್ರಾಸ್‌ನಲ್ಲಿ ಶ್ರೀರಾಮನ ಫ್ಲೆಕ್ಸ್‌ ಮತ್ತು ಮುದ್ದಬೋವಿ ಕಾಲೋನಿಯ 2 ನೇ ಕ್ರಾಸ್‌ನಲ್ಲಿ ಚಾಮುಂಡೇಶ್ವರಿ ಫ್ಲೆಕ್ಸನ್ನು ಕಿಡಿಗೇಡಿಗಳು ರಾತ್ರಿ ವೇಳೆ ವಿರೂಪ ಮಾಡಿ, ಹರಿದು ಹಾಕಿದ್ದರು.

ಇದನ್ನೂ ಓದಿ:Mangalore: ಕಣಜದ ಹುಳಗಳ ದಾಳಿ, ವಿದ್ಯಾರ್ಥಿನಿ ಸಾವು

ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎನ್ನುವ ಆರೋಪದಲ್ಲಿ ಅಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿ ತನಿಖೆ ಮಾಡುತ್ತಿದ್ದಾರೆ.