IPL-2026: 5 ಆಟಗಾರರನ್ನು ಕೈ ಬಿಡಲು ಮುಂದಾದ CSK!!

Share the Article

IPL-2026 ಗೆ ಈಗಾಗಲೇ ತಯಾರಿ ಆರಂಭವಾಗಿದೆ. ಮುಂದಿನ ಡಿಸೆಂಬರ್‌ ಮಧ್ಯ ಭಾಗದಲ್ಲಿ ಮಿನಿ ಹರಾಜು ನಡೆಯಲಿದೆ. ನವೆಂಬರ್‌ 15ರೊಳಗೆ ಎಲ್ಲಾ ತಂಡಗಳು ತಮ್ಮ ರಿಟೆನ್ಶನ್‌ ಪಟ್ಟಿಯನ್ನು ನೀಡಬೇಕು ಎಂದು ವರದಿಯಾಗಿದೆ. ಇದರ ನಡುವೆ ವಿವಿಧ ತಂಡಗಳಲ್ಲಿ ಯಾವೆಲ್ಲ ಆಟಗಾರರು ಇರಲಿದ್ದಾರೆ, ಯಾರೆಲ್ಲ ಹೊರಕ್ಕೆ ಹೋಗಲಿದ್ದಾರೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಇದರ ನಡುವೆ CSK ತನ್ನ ತಂಡದಿಂದ ಐದು ಆಟಗಾರರನ್ನು ಕೈ ಬಿಡಲು ಮುಂದಾಗಿದೆ ಎಂಬ ಸುದ್ದಿ ಬಂದಿದೆ.

ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯೆತೆಯಿದೆ. ಒಂದಿಷ್ಟು ಆಟಗಾರರನ್ನು ಬಿಟ್ಟು, ಹೊಸ ಹುಡುಗರನ್ನು ಪಾಳಯಕ್ಕೆ ಸೇರಿಸಿಕೊಳ್ಳುವ ಅಂದಾಜಿನಲ್ಲಿದೆ CSK

ಬಿಡುಗಡೆ ಪಟ್ಟಿಯಲ್ಲಿರುವ ಆಟಗಾರರಲ್ಲಿ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಮತ್ತು ಡೆವೊನ್ ಕಾನ್ವೇ ಸೇರಿದ್ದಾರೆ ಎಂದು ವರದಿಯಾಗಿದೆ. ಆರ್ ಅಶ್ವಿನ್ ಐಪಿಎಲ್‌ನಿಂದ ನಿವೃತ್ತರಾದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಗೆ ಈಗಾಗಲೇ 9.75 ಕೋಟಿ ರೂಪಾಯಿ ಖಾತೆಗೆ ಬಿದ್ದಿದೆ. ಮೇಲೆ ಉಲ್ಲೇಖಿಸಲಾದ ಆಟಗಾರರನ್ನು ಸಹ ಬಿಡುಗಡೆ ಮಾಡಿದರೆ, ಸಿಎಸ್‌ಕೆ ಪರ್ಸ್‌ ಗೆ 25 ಕೋಟಿ ರೂ.ಗಳನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ;Kerela : ಪ್ರೀತಿಯಲ್ಲಿ ಬಿದ್ದಿದ್ದ ಹಿಂದೂ ಯುವತಿ ಆತ್ಮಹತ್ಯೆ – ಲವ್ ಜಿಹಾದ್ ಶಂಕೆ!!

Comments are closed.