ಮಳೆಗಾಲ ಹೊತ್ತು ತರುತ್ತವೆ ಖುಷಿಯ ಜೊತೆಗೆ ಸಮಸ್ಯೆಗಳ ಸರಮಾಲೆ ! ಗುಡುಗು ಮಿಂಚುಗಳ ಬಗೆಗೊಮ್ಮೆ ಎಚ್ಚರವಿರಲಿ. ತಪ್ಪಿಯೂ ಮಾಡದಿರಿ ಈ ತಪ್ಪುಗಳು

ಮಳೆಗಾಲ ಬಂತೆಂದರೆ ಸಾಕು ಎಲ್ಲಾ ಕಡೆಗಳಲ್ಲೂ ಸಾವು ನೋವುಗಳು, ಸಮಸ್ಯೆಗಳು ಸಾಮಾನ್ಯ.ಜನತೆ ಬಹಳ ಎಚ್ಚರಿಕೆವಹಿಸಬೇಕಾದ ಒಂದು ಕಾಲವಿದು. ಅದೆಷ್ಟೇ ಎಚ್ಚರಿಕೆಯಿಂದಿದ್ದರೂ,ಯಾವ ಸಮಯಕ್ಕೆ ಪ್ರವಾಹ, ಗಾಳಿ, ಗುಡುಗು ಬರಬಹುದೆಂದು ಊಹಿಸಲು ಅಸಾಧ್ಯ.

ದೇಶದಲ್ಲಿ ಪ್ರತೀ ವರ್ಷ ಹಲವಾರು ಜನರು ಪ್ರವಾಹಕ್ಕೆ ಸಿಲುಕಿ ತಮ್ಮನ್ನು ತಾವು ಸಂಪೂರ್ಣ ಕಳೆದುಕೊಳ್ಳುವ ದೃಶ್ಯ ಕಣ್ಣ ಮುಂದೆ ಮಾಸದೆ ಇನ್ನೂ ಹಾಗೇ ಉಳಿದಿದೆ. ಅದರಲ್ಲೂ ಸುಮಾರು 2 ಸಾವಿರ ಜನರು ಸಿಡಿಲು ಬಡಿದು ಸಾಯುತ್ತಿದ್ದಾರೆ ಎಂದಾದರೆ ಜನತೆಯ ನಿರ್ಲಕ್ಷಕ್ಕೆ ಮಿತಿ ಇಲ್ಲದಂತಾಗಿರುವುದು ಸಹಜ. ಈ ಬಗ್ಗೆ ಜನತೆಗೆ ಅರಿವು ಮೂಡಿಸಲೆಂದು ಕೆಲವು ಎಚ್ಚರಿಕೆ ವಹಿಸಬೇಕಾದ ನಿಯಮಗಳ ಜೊತೆ ನಾವಿಂದು ನಿಮ್ಮೊಂದಿಗೆ.

ಮಳೆಗಾಲ ಅಂದಮೇಲೆ ಮಿಂಚು ಗುಡುಗು ಗಾಳಿ ಎಲ್ಲವೂ ಸಾಮಾನ್ಯ.ಆದರೆ ಮಿಂಚು ಗುಡುಗು ಬರುವ ಮುನ್ಸೂಚನೆಯನ್ನು ನಮ್ಮ ದೇಹದ ಕೆಲವು ಅಂಗಗಳೇ ನಮಗೆ ಗೊತ್ತುಪಡಿಸುತ್ತವೆ ಎಂಬುವುದು ಕೆಲವರಿಗೆ ಇನ್ನೂ ಅರಿವಿಲ್ಲ.ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ನಮ್ಮ ದೇಹದ ಕತ್ತಿನ ಭಾಗ ಅಥವಾ ತಲೆಯ ಕೂದಲು ಎದ್ದು ನಿಲ್ಲಲು ಪ್ರಾರಂಭಿಸುತ್ತವೆ, ಇದೇ ಸೂಚನೆಯನ್ನರಿತು ಸುರಕ್ಷಿತ ಸ್ಥಳದ ಆಶ್ರಯಕ್ಕೆ ಬಂದು ನಿಂತು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಉತ್ತಮ.

ಇನ್ನೂ ಮಳೆ ಗುಡುಗು ಬರುವ ಸೂಚನೆ ಸಿಕ್ಕಿದ ಕೂಡಲೇ ಈ ಕೆಳಗಿನ ಕೆಲಸದಲ್ಲಿ ನಾವು ನಿರತರಾಗಿದ್ದರೆ ದಯವಿಟ್ಟು ನಿಲ್ಲಿಸಬೇಕು. ಯಾಕೆಂದರೆ ಕೆಲವೊಂದು ವಿಚಾರಗಳ ಅರಿವಿದ್ದರೂ ಮನುಷ್ಯ ಯಾವುದನ್ನೂ ಲೆಕ್ಕಿಸದೇ ತನ್ನ ಕೆಲಸದಲ್ಲಿ ನಿರತವಾಗಿದ್ದಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಅವುಗಳೆಂದರೆ,

  1. ಯಾವುದೇ ವಿದ್ಯುತ್ ಅಥವಾ ದೂರವಾಣಿ ಕಂಬಗಳ ಬಳಿಗೆ ಹೋಗದಿರುವುದು ಉತ್ತಮ.
  2. ಮೊಬೈಲ್ ಟವರ್ ಗಳು, ಎತ್ತರದ ಬಿಲ್ಡಿಂಗ್ ಗಳು ಮುಂತಾದ ಕಡೆಗಳಲ್ಲಿ ಕೆಲಸ ಮಾಡುವವರು ಕೂಡಲೇ ಇಳಿದು ಬಿಡಬೇಕು. ಮನೆಯ ಮಾಡಿನ ಮೇಲೆ ಕೆಲಸ ಮಾಡುವವರು ನಿಲ್ಲಿಸಿ ಮನೆಯೊಳಗೆ ಸೇರಿಕೊಳ್ಳಬೇಕು.
  3. 30-30 ರೂಲ್ ಫಾಲೋ ಮಾಡಿ. ಬಾರೀ ಮಿಂಚಿನ ಶಬ್ದ ಕೇಳಿದ ಬಳಿಕ ಸುಮಾರು 30 ನಿಮಿಷಗಳವರೆಗೆ ಮನೆಯಿಂದ ಹೊರಗೆ ಹೋಗದಿರುವುದು. ಇನ್ನೊಂದು ವಿಷಯ : ಮಿಂಚು ಕಾಣಿಸಿಕೊಂಡ ಕೂಡಲೇ 1,2 .. ಎಂದು 30 ರವರೆಗೆ ಕೌಂಟ್ ಮಾಡಿ. 30 ಅನಿಸುವುದರ ಒಳಗೆ ಗುಡುಗು ಕೇಳಿಬಂದರೆ, ತಕ್ಷಣ ಎಲ್ಲೇ ಇದ್ದರೂ, ಏನೇ ಕೆಲಸ ಮಾಡುತ್ತಿದ್ದರು ಕೂಡಾ ನಿಲ್ಲಿಸಿ ಸೀದಾ ಮನೆಯೊಳಗೆ ಹೋಗಿ ಸುರಕ್ಷಿತವಾಗಿ ಇರಿ.
  4. ಅದಲ್ಲದೇ, ಮೊಬೈಲ್ ಹಾಗೂ ಇನ್ನಿತರ ಸರ್ವರ್ ಇರುವ ಗ್ಯಾಜೆಟ್ಗಳನ್ನು ಮುಟ್ಟದಿದ್ದರೆ ಒಳ್ಳೆಯದು. ಜೋರಾಗಿ ಸಿಡಿಲು ಬರುವ ಸಮಯದಲ್ಲಿ ಮನೆಯ ಮೈನ್ ಸ್ವಿಚ್ ಆಫ್ ಮಾಡಿ.
  1. ನೀರಿನಲ್ಲಿ ಕೂಡಾ ವಿದ್ಯುತ್ ಹಾದುಹೋಗುವುದರಿಂದ ನೀರಿನ ಸಂಪರ್ಕಕ್ಕೆ ಬರದಿದ್ದರೆ ಉತ್ತಮ. ಸ್ವಿಮಿಂಗ್ಪೂಲ್ ಕೆರೆ ನದಿ ಸಮುದ್ರ ಈಜಾಡುತ್ತಿದ್ದರು ಕೂಡಲೇ ಸ್ಥಳಕ್ಕೆ ಸೇರಿಕೊಳ್ಳಿ.
  2. ಮರ, ಅಥವಾ ತಾಮ್ರ, ಕಬ್ಬಿಣ ಸ್ಟೀಲ್ ಪಾತ್ರೆಗಳನ್ನು ಕೂಡಾ ಮುಟ್ಟದಿರುವುದು ಉತ್ತಮ. ಮನೆಯೊಳಗೆ ಇರುವಾಗ ಲೋಹಗಳ ವಸ್ತುವನ್ನು ಬಳಸಕೂಡದು ಮತ್ತು ಲೋಹದ ಚೇರಿನಲ್ಲಿ ಕುಳಿತುಕೊಳ್ಳ ಬಾರದು. ಕಿಟಕಿಯ ಬದಿಯಲ್ಲಿ ಕುಳಿತುಕೊಳ್ಳಬೇಡಿ.
  3. ಮರದ ಅಥವಾ ವಿದ್ಯುತ್ ವಾಹಕ ವಲ್ಲದ ವಸ್ತುವಿನ ಮೇಲೆ ಕುಳಿತುಕೊಂಡು ಕಾಲನ್ನು ರಬ್ಬರ್ ಅಥವಾ ಬಟ್ಟೆಯ ಮೇಲೆ ಕಾಲಿಡಬೇಕು. ಮನೆ ಒಳಗಿದ್ದಾಗ ಕಾಂಕ್ರೀಟ್ ಗೋಡೆಯ ಮೇಲೆ ಒರಗಿ ಕೂರಬಾರದು ಅಥವಾ ದೇಹದ ಯಾವುದೇ ಭಾಗವನ್ನು ಗೋಡೆಗೆ ತಾಗಿಸಿ ಕುಳಿತುಕೊಳ್ಳಬಾರದು.
  4. ಮಿಂಚು ಗುಡುಗು ಇರುವಾಗ ಮರದ ಕೆಳಗೆ ನಿಲ್ಲ ಬೇಡಿ.
  5. ವಿಶಾಲವಾದ ಬಯಲಿನಲ್ಲಿ, ಮೈದಾನದಲ್ಲಿ ನಿಲ್ಲುವುದು ಸಿಡಿಲನ್ನು ನಮ್ಮೆಡೆಗೆ ಆಹ್ವಾನಿಸಿದ ಹಾಗೆ.
  6. ಮಿಂಚು ಗುಡುಗು ಇರುವಾಗ, ಮನೆ ಒಳಗೆ ಅಥವಾ ಹೊರಗೆ ನೀರನ್ನು ಬಳಸುವ ಯಾವುದೇ ಕೆಲಸ ಮಾಡಬಾರದು. ಬಟ್ಟೆ ಒಗೆಯುವುದು, ಸ್ನಾನ ಮಾಡುವುದು ಕೂಡದು.
  7. ಮಿಂಚು ಗುಡುಗು ಇರುವಾಗ ತೋಟಕ್ಕೆ ನೀರು ಹಾಯಿಸುವುದು ಮಾಡಕೂಡದು.
  8. ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಟವರ್ ಗೆ ಮತ್ತು ಮನೆಗೆ ಅಥವಾ ಸ್ಥಾವರಗಳಿಗೆ ಮಿಂಚು ಪ್ರತಿಬಂಧಕಗಳನ್ನು ಅಳವಡಿಸಿಕೊಳ್ಳಬೇಕು. ಮಿಂಚು ಪ್ರತಿಬಂಧಕಗಳನ್ನು ಹಾಕಿಸಿಕೊಳ್ಳುವ ಆಗ ಪ್ರಫೆಷನಲ್ ಅಂದರೆ ವೃತ್ತಿಪರ ಇಂಜಿನಿಯರರ ಸಹಾಯ ಪಡೆದುಕೊಳ್ಳಿ. ಸರಿಯಾದ ರೀತಿಯಲ್ಲಿ ಅರ್ಥಿಂಗ್ ವ್ಯವಸ್ಥೆ ಇಲ್ಲದೆ ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ.

ಹೀಗೇ ಇದಲ್ಲದೆ ಅರಿವಿಗೆ ಬರದೇ ಆಗುವ ಅನಾಹುತಗಳು ಇನ್ನೂ ಸಾಕಷ್ಟಿವೆ. ಮಳೆಗಾಲದಲ್ಲಿ ಅನಾಹುತಗಳು ಆಗದಂತೆ, ಆದಷ್ಟು ಎಚ್ಚರದಿಂದ ಇರುವುದು ಜನತೆಯ ಕರ್ತವ್ಯ.

Leave A Reply

Your email address will not be published.