Cinema News: ಮಹೇಶ್ ಬಾಬು – ರಾಜಮೌಳಿ ಸಿನಿಮಾದ ಹೆಸರು ಘೋಷಣೆ!! ಹೆಸರು ಸರಿಯಾಗಿಲ್ಲ ಬೇರೆ ಇಡಿ ಎಂದ ಫ್ಯಾನ್ಸ್

Share the Article

Cinema News: ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕ ರಾಜ ಮೌಳಿಯವರು ಒಂದು ಬ್ರಾಂಡ್ ಆಗಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಬಾಹುಬಲಿ, RRR ಸಿನಿಮಾಗಳ ಮುಖಾಂತರ ಜಗದ್ವಿಖ್ಯಾತಿಗಳಿಸಿದ ಅವರು ಇದೀಗ ಮಹೇಶ್ ಬಾಬು ಜೊತೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಒಂದೇ ಬಾರಿಗೆ 120 ದೇಶಗಳಲ್ಲಿ ಬಿಡುಗಡೆಯಾಗುತ್ತಿದ್ದಾರೆ. ಇದೀಗ ಈ ಚಿತ್ರದ ಹೆಸರು ರಿಲೀಸ್ ಆಗಿದ್ದು ಫ್ಯಾನ್ಸ್ ಗಳಲ್ಲಿ ಅತೀವ ಬೇಸರ ಉಂಟು ಮಾಡಿದೆ. ಅಷ್ಟೇ ಅಲ್ಲ ಸಿನಿಮಾದ ಹೆಸರು ಬದಲಿಸಿ ಎಂದು ಅನೇಕರು ಮನವಿ ಮಾಡುತ್ತಿದ್ದಾರೆ.

ವದಂತಿ ಪ್ರಕಾರ, ಈ ಚಿತ್ರದ ಶೀರ್ಷಿಕೆ ‘ವಾರಣಾಸಿ’ ಎಂದು ಹೇಳಲಾಗುತ್ತಿದೆ. ಈ ಹೆಸರು ಜನರ ತಲೆಯಲ್ಲಿ ಮೂಡಲು ಕಾರಣ.. ಈ ಚಿತ್ರಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ವಾರಣಾಸಿ ಸೆಟ್ ನಿರ್ಮಿಸಲಾಗಿದೆ ಎಂಬ ಮಾತು. ಆದ್ದರಿಂದ ಚಿತ್ರದ ಟೈಟಲ್‌ ವಾರಣಾಸಿ ಎಂದು ಇರಲಿದೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದರೆ, ಈ ಶೀರ್ಷಿಕೆ ಅಷ್ಟೊಂದು ಚನ್ನಾಗಿಲ್ಲ ಬೇಡ ಅಂತ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Comments are closed.