Caste Survey : ಜಾತಿ ಸಮೀಕ್ಷೆ – ಪರಿಶಿಷ್ಟ ಜಾತಿಯವರೆಂದು ಶಿಕ್ಷಕಿ ಕುಳಿತ ಕುರ್ಚಿ ತೊಳೆದಿಟ್ಟ ಮನೆಯವರು!!

Share the Article

Caste Survey : ರಾಜ್ಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಜಾತಿ ಸಮೀಕ್ಷೆಯು ನಡೆಯುತ್ತಿದೆ. ಶಾಲಾ ಶಿಕ್ಷಕರನ್ನು ಬಳಸಿಕೊಂಡು ಈ ಸಮೀಕ್ಷೆ ನಡೆದಿದ್ದು, ಇದೀಗ ಮತ್ತೆ ಸಮೀಕ್ಷೆಯ ಅವಧಿ ಕೂಡ ವಿಸ್ತರಣೆಯಾಗಿದೆ. ಇದರ ನಡುವೆ ಆಗಾಗ ಸಮೀಕ್ಷೆ ಸಂದರ್ಭದಲ್ಲಿ ನಡೆಯುವಂತಹ ಕೆಲವು ವಿಚಿತ್ರ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಸಮೀಕ್ಷೆಗೆ ಬಂದಿದ್ದ ಶಿಕ್ಷಕಿ ಒಬ್ಬರು ಪರಿಶಿಷ್ಟ ಜಾತಿಯವರೆಂದು ಅವರು ಕುಳಿತಿದ್ದ ಕುರ್ಚಿಯನ್ನು ಮನೆಯವರು ತೊಳೆದಿಟ್ಟ ಪ್ರಸಂಗ ನಡೆದಿದೆ.

ಹೌದು, ಪರಿಶಿಷ್ಟ ಜಾತಿಯ ಶಿಕ್ಷಕಿ ಒಬ್ಬರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ಮೇಲ್ವರ್ಗದವರ ಮನೆಗೆ ತೆರಳಿ ಸಮೀಕ್ಷೆ ನಡೆಸುವಾಗ ನಡೆದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರ ಮನೆಯಲ್ಲಿಅವರ ಮನೆಯಲ್ಲಿ ಮಾಹಿತಿ ಕಲೆ ಹಾಕುವ ವೇಳೆ ಮನೆಯೊಳಗೆ ನೆಟ್‌ವರ್ಕ್‌ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೊರಗೆ ಬಂದು ಆಯಪ್‌ನಲ್ಲಿ ಮಾಹಿತಿ ದಾಖಲಿಸಿ ಮತ್ತೆ ಮನೆಯೊಳಗೆ ಹೋದಾಗ ನಾವು ಕುಳಿತಿದ್ದ ಕುರ್ಚಿಗಳನ್ನು ನೀರಿನಿಂದ ತೊಳೆಯುತ್ತಿದ್ದ ದೃಶ್ಯ ಕಂಡು ಬೇಸರವಾಯಿತು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Bigg Boss Kannada 12: ರೆಸಾರ್ಟ್‌ನಲ್ಲಿರುವ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಈ ಕಠಿಣ ನಿಯಮ ಪಾಲನೆ ಕಡ್ಡಾಯ!

ಅಲ್ಲದೆ ಸಮೀಕ್ಷೆ ವೇಳೆ ಕೆಲವರು ಯಾವ ಜಾತಿ ಎಂದು ಕೇಳುತ್ತಾರೆ, ಪರಿಶಿಷ್ಟರೆಂದು ತಿಳಿದ ಕೂಡಲೇ ಜಗುಲಿಯಲ್ಲಿ ಕೂರಲು ಹೇಳುತ್ತಾರೆ. ಸಮೀಕ್ಷೆ ಮುಗಿದ ಬಳಿಕ ಜಗುಲಿ ಶುಚಿಗೊಳಿಸುತ್ತಾರೆ. ಇಂತಹ ಕಹಿ ಘಟನೆಗಳು ನೋವುಂಟು ಮಾಡುತ್ತಿವೆ. ಅಸ್ಪೃಶ್ಯತೆ ಎಂಬ ಕರಾಳತೆ ಇಂದಿಗೂ ಕೆಲವೆಡೆ ಜೀವಂತವಾಗಿದೆ’ ಎಂದು ಸಮೀಕ್ಷಕರು ಅಳಲು ತೋಡಿಕೊಂಡರು.

Comments are closed.