BSNL ನಿಂದ ಹೊಸ ಸೇವೆ ಆರಂಭ- ಜಿಯೋ, ಏರ್‌ಟೆಲ್‌ಗೆ ಶಾಕ್ !!

Share the Article

BSNL: ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ತೀವ್ರ ಸ್ಪರ್ಧೆ ನೀಡಲು ಮುಂದಾಗಿದೆ.

ಹೌದು, ದೇಶದ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದ ಹೊಸ ಸರ್ಕಲ್‌ಗಳಲ್ಲಿನ ಬಳಕೆದಾರರಿಗಾಗಿ ವಾಯ್ಸ್ ಓವರ್ ವೈ-ಫೈ (VoWiFi) ಸೇವೆಯನ್ನು ಪರಿಚಯಿಸಿದೆ. ಸೆಲ್ಯುಲಾರ್ ಕವರೇಜ್ ಇಲ್ಲದಿದ್ದರೂ ಗ್ರಾಹಕರಿಗೆ ವೈ-ಫೈ ನೆಟ್‌ವರ್ಕ್ ಮೂಲಕ ವಾಯ್ಸ್ ಕಾಲ್‌ಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವುದೇ ವಾಯ್ಸ್ ಓವರ್ ವೈ-ಫೈ (VoWiFi) ಸೇವೆಯಾಗಿದೆ.

ಅಂದಹಾಗೆ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಬಹಳ ಹಿಂದಿನಿಂದಲೂ ವಾಯ್ಸ್ ವೈ-ಫೈ ಸೌಲಭ್ಯವನ್ನು ನೀಡುತ್ತಿವೆ. ಈಗ ಸಾರ್ವಜನಿಕ ವಲಯದ BSNL ಕೂಡ ಈ ವ್ಯವಸ್ಥೆಯನ್ನು ಪರಿಚಯಿಸುತ್ತಿರುವುದು ವಿಶೇಷ. ವೈ-ಫೈ ಕಾಲಿಂಗ್ ಸೌಲಭ್ಯದಿಂದ BSNL ಬಳಕೆದಾರರು ಕಡಿಮೆ ಸೆಲ್ಯುಲಾರ್ ಸಿಗ್ನಲ್ ಇರುವ ಪ್ರದೇಶಗಳಲ್ಲೂ ಸಾಮಾನ್ಯ ವಾಯ್ಸ್ ಕಾಲ್‌ಗಳನ್ನು ಮಾಡಬಹುದಾಗಿದೆ.

Comments are closed.