Taylor a humpre : ಮಕ್ಕಳಿಗೆ ಹೆಸರಿಡುವುದೇ ಈಕೆಯ ಬಿಸಿನೆಸ್ – ಒಂದು ಹೆಸರಿಗೆ ಮಾಡ್ತಾಳೆ 2 ಲಕ್ಷ ಚಾರ್ಜ್!!

Taylor a humpre : ಮನೆಯಲ್ಲಿ ಮಗು ಹುಟ್ಟಿದ ಸಮಯದಲ್ಲಿ ಅದಕ್ಕೆ ಏನು ಹೆಸರಿಡಬೇಕೆಂಬುದು ಕುಟುಂಬಸ್ಥರೆಲ್ಲ ಸೇರಿ ಚರ್ಚಿಸುತ್ತಾರೆ. ಅಲ್ಲದೆ ಜ್ಯೋತಿಷ್ಯರ ಬಳಿ ಹೋಗಿ ಶಾಸ್ತ್ರ ಕೇಳಿ, ನಕ್ಷತ್ರ -ರಾಶಿ ಹಿನ್ನೆಲೆಯಲ್ಲಿ ಯಾವ ಅಕ್ಷರ ಮೊದಲು ಬರುವ ಹೆಸರನ್ನು ಇಡಬೇಕು ಎಂಬುದನ್ನು ಕೇಳಿ ಮಗುವಿಗೆ ನಾಮಕರಣ ಮಾಡುತ್ತಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿಯೂ ಕೂಡ ಮಕ್ಕಳ ಹೆಸರನ್ನು ಹುಡುಕಿ ಇಡುವುದು ಇದೆ. ಆದರೆ ಇಲ್ಲೊಬ್ಬಳು ಮಗುವಿಗೆ ಹೆಸರಿಡುವುದನ್ನೆ ಬಿಸಿನೆಸ್ ಮಾಡಿಕೊಂಡಿದ್ದು ಒಂದು ಹೆಸರಿಗೆ ಬರೋಬ್ಬರಿ 2 ಲಕ್ಷ ಚಾರ್ಜ್ ಮಾಡುತ್ತಾಳೆ.

ಹೌದು, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಲಹೆಗಾರ್ತಿ ಟೇಲರ್ ಎ. ಹಂಫ್ರೆ ಹೊಸ ಬ್ಯುಸಿನೆಸ್ ಮಾಡ್ತಿದ್ದಾರೆ. ಪರಿಪೂರ್ಣ ಹೆಸರನ್ನು ಮಕ್ಕಳಿಗಿಡಲು ಪಾಲಕರಿಗೆ ಸೂಚನೆ ನೀಡೋದೇ ಹಂಫ್ರೆ ಬ್ಯುಸಿನೆಸ್. 37 ವರ್ಷದ ಹಂಫ್ರೆ ಒಂದು ದಶಕದ ಹಿಂದೆ ಮಗುವಿಗೆ ಹೆಸರು ಸೂಚಿಸೋ ಈ ಬ್ಯುಸಿನೆಸ್ ಮಾಡ್ತಿದ್ದಾರೆ. ಮೊದಲು ಸೋಶಿಯಲ್ ಮೀಡಿಯಾದಲ್ಲಿ ಹೆಸರುಗಳನ್ನು ಸೂಚಿಸ್ತಿದ್ದ ಹಂಫ್ರೆ ಈಗ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿದ್ದು, 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಅಂದಹಾಗೆ ಪೋಷಕರು ಮಕ್ಕಳಿಗೆ ಹೆಸರಿಡುವ ಮುನ್ನ ಹಂಫ್ರೆಯನ್ನು ಸಂಪರ್ಕಿಸ್ತಾರೆ. ಹಂಫ್ರೆ ಈ ಬಗ್ಗೆ ಸ್ಟಡಿ ಮಾಡಿ ಸೂಕ್ತವಾದ ಹೆಸರನ್ನು ಹೇಳ್ತಾರೆ. ಹಂಫ್ರೆ 30,000 ಡಾಲರ್ ಅಂದ್ರೆ ಸುಮಾರು 2.5 ಲಕ್ಷ ರೂಪಾಯಿ ಚಾರ್ಜ್ ಮಾಡ್ತಾರೆ. ಇನ್ನು ಹಂಫ್ರೆ ಬರೀ ಯಾವುದೋ ಒಂದು ಹೆಸರನ್ನು ಹೇಳೋದಿಲ್ಲ. ಸರಿಯಾದ ಅರ್ಥ, ಹೆಸರಿನ ಮೂಲ, ಉತ್ಸಾಹ ಎಲ್ಲವನ್ನು ಗಮನಿಸಿ, ಸೂಚಿಸುತ್ತಾರೆ. ಹಂಫ್ರೆ ಆರಂಭಿಕ ಬೆಲೆ 200 ಡಾಲರ್ ನಿಂದ ಶುರುವಾಗುತ್ತೆ. ಹೆಸರಿನ ಅರ್ಥ, ಜನಪ್ರಿಯತೆಯ ಹೆಸರುಗಳ ಇ ಮೇಲನ್ನು ಹಂಫ್ರೆ ಕಳಿಸ್ತಾರೆ.
Comments are closed.