Health Tips: ನಿದ್ದೆ ಮಾಡುವಾಗ ಬೆನ್ನು ನೋವು ಬರುತ್ತದೆಯೇ? ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ

Share the Article

 

Health Tips : ಆಧುನಿಕ ಜೀವನಶೈಲಿಗೆ, ಆಹಾರ ಪದ್ಧತಿಗೆ ಒಗ್ಗಿಕೊಂಡಿರುವ ನಾವು ನಿದ್ದೆ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಬೆನ್ನು ನೋವಿಂದ ಬಳಲುತ್ತೇವೆ. ಅನೇಕರಿಗೆ ಇದು ವಿಪರೀತವಾಗಿ ಕಾಡುತ್ತದೆ. ಒಂದು ವೇಳೆ ನೀವು ಕೂಡ ಇದೇ ರೀತಿ ನೋವಿನಿಂದ ಬಳಲುತ್ತಿದ್ದರೆ ತಪ್ಪಿಯು ಈ ಆಹಾರಗಳನ್ನು ಸೇವಿಸಬೇಡಿ.

 

ಕೆಫೀನ್ ಸೇವನೆ:

ಪ್ರತಿನಿತ್ಯ ಕೆಫೀನ್ ಸೇವನೆ ಮಾಡುವುದನ್ನು ಸೀಮಿತಗೊಳಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಹೆಚ್ಚು ಕಾಫಿ ಅಥವಾ ಚಹಾ ಕುಡಿಯುವುದರಿಂದ ಅದರಲ್ಲಿರುವ ಕೆಫೀನ್ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

 

ಹೆಚ್ಚು ಪ್ರೋಟೀನ್ ಇರುವ ಆಹಾರಗಳು:

ಸಾಮಾನ್ಯವಾಗಿ ಪ್ರತಿನಿತ್ಯ ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಪರಿಣಾಮವಾಗಿ, ದೇಹದಲ್ಲಿರುವ ಒಟ್ಟು ಕ್ಯಾಲ್ಸಿಯಂ ದೇಹದಿಂದ ಹೊರಹೋಗುತ್ತದೆ. ಇದು ಬೆನ್ನು ನೋವಿಗೆ ಕಾರಣವಾಗುತ್ತದೆ. ಆದ್ದರಿಂದ, ಮಿತವಾಗಿ ಪ್ರೋಟೀನ್ ಸೇವಿಸುವುದು ಸೂಕ್ತ.

 

ಕೆಲವು ಔಷಧಿಗಳು:

ಆಮ್ಲೀಯತೆಗೆ ಹೆಚ್ಚು ಔಷಧಿಗಳನ್ನು ಬಳಸುವುದರಿಂದ ಬೆನ್ನು ನೋವು ಉಂಟಾಗುತ್ತದೆ. ಹೀಗೆ ಮಾಡುವುದರಿಂದ ದೇಹವು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮವಾಗಿ, ಮೂಳೆಗಳು ದುರ್ಬಲಗೊಳ್ಳುತ್ತವೆ.

Comments are closed.