Karnataka: ಸರ್ಕಾರಿ ನೌಕರರು ಕೂಡಲೇ ಈ ಕೆಲಸ ಮಾಡುವಂತೆ ಸರ್ಕಾರ ಸೂಚನೆ


Karnataka: ಎಲ್ಲಾ ಪ್ರಮುಖ ಬ್ಯಾಂಕ್ ಗಳಲ್ಲಿ ನೀಡುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರಿ ನೌಕರರ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು ಈ ಮೂಲಕ ಸರ್ಕಾರ ತಿಳಿಸಿದೆ.
ಈ ಹಿನ್ನಲೆ ಪ್ರತಿಯೊಬ್ಬ ಸರ್ಕಾರಿ ನೌಕರರ (government employees ) ತಮ್ಮ ESS Login ನಲ್ಲಿ PMJJBY ಹಾಗೂ PMSBY ಮಾಹಿತಿಯನ್ನು ತುಂಬಿ Submit ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ – ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/ ಲಿಂಕ್ ಅನ್ನು ಪ್ರವೇಶಿಸಬಹುದಾಗಿದೆ.
ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಿಮಾ ವಿವರಗಳನ್ನು ಹೆಚ್ಆರ್ಎಂಎಸ್ ಇಎಸ್ಎಸ್ ಲಾಗಿನ್ https://hrmsess.karnataka.gov.in ನ ಪೋರ್ಟಲ್ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.
Comments are closed.