Life style: ಮಕ್ಕಳ ತಲೆಯಲ್ಲಿ ಹೇನು ಆಗಿದ್ರೆ ಈ ಸಿಂಪಲ್‌ ಟಿಪ್ಸ್ ಟ್ರೈ ಮಾಡಿ

Share the Article

Life style: ಮಕ್ಕಳ ತಲೆಯಲ್ಲಿ ಹೆಚ್ಚಾಗಿ ಹೇನುಗಳು ತುಂಬಿರುತ್ತದೆ. ಈ ಹೇನುಗಳಿಂದ ಮಕ್ಕಳಿಗೆ ಕಿರಿ ಕಿರಿ ಉಂಟಾಗುತ್ತದೆ. ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತೆ. ಹೇನು ಮನೆಯವ್ರರಿಗೆಲ್ಲ ಹರಡುತ್ತೆ. ಈ ರೀತಿಯ ಹೇನಿನ ಸಮಸ್ಯೆಗೆ ಏನು ಮಾಡ್ಬೇಕು? ಎಂದು ಇಲ್ಲಿ ತಿಳಿಸಲಾಗಿದೆ.

ಒಂದು ಬೌಲ್‌ಗೆ ಎರಡು ಚಮಚ ಆಗುವಷ್ಟು ತೆಂಗಿನ ಎಣ್ಣೆ ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಎರಡು ಬಿಲ್ಲೆ ಕರ್ಪೂರ ಜಜ್ಜಿ ಪುಡಿ ಮಾಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಿ. ಈ ಮಿಶ್ರಣ ವನ್ನು ತಲೆಯ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡದ ವರೆಗೂ, ಚೆನ್ನಾಗಿ ಈ ಮಿಶ್ರಣವನ್ನು ಹಚ್ಚಿ, ಸರಿಯಾಗಿ ಮಸಾಜ್ ಮಾಡಿ. 2 ಗಂಟೆ ಬಿಟ್ಟು ನಂತರ ಸ್ನಾನ ಮಾಡಿ.

ಇದನ್ನೂ ಓದಿ:ರಂಗರತ್ನ ಬಿರುದಾಂಕಿತ ಪ್ರಸನ್ನ ಶೆಟ್ಟಿ ಕಲಾಸಾಧಕನ ಕಿರು ಪರಿಚಯ 

ಇನ್ನು ಇನ್ನೊಂದು ಮನೆಮದ್ದು ಇಲ್ಲಿದೆ. ಎರಡು ಟೇಬಲ್ ಮೆಂತೆ ಕಾಳುಗಳನ್ನು, ಮಲಗುವ ಮುನ್ನ, ರಾತ್ರಿ ಪೂರ್ತಿ ನೆನೆಹಾಕಿ, ಆಮೇಲೆ ಮುಂಜಾನೆ ಈ ಕಾಳನ್ನು ಚೆನ್ನಾಗಿ ರುಬ್ಬಿ ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ. ಆಮೇಲೆ ತೆಂಗಿನ ಎಣ್ಣೆಯ ಜೊತೆಗೆ, ಈ ಮೆಂತೆ ಕಾಳುಗಳ ಪೇಸ್ಟ್ ಮಿಶ್ರಣ ಮಾಡಿ, ತಲೆಗೆ ಹಚ್ಚಿ ಕೊಂಡು ಎರಡು ಗಂಟೆಗಳ ನಂತರ ತಲೆಸ್ನಾನ ಮಾಡಿ. ಹೀಗೆ ಹೇನುಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ವಿಧಾನವನ್ನು ವಾರದಲ್ಲಿ ಎರಡು ಮೂರು ಅನುಸರಿಸಬೇಕು.

Comments are closed.