Home News ರಾ.ಹೆದ್ದಾರಿ ಮಧ್ಯೆ ಟ್ಯಾಂಕರ್ ನಿಲ್ಲಿಸಿ ನಿದ್ದೆಗೆ ಜಾರಿದ ಆಸಾಮಿ

ರಾ.ಹೆದ್ದಾರಿ ಮಧ್ಯೆ ಟ್ಯಾಂಕರ್ ನಿಲ್ಲಿಸಿ ನಿದ್ದೆಗೆ ಜಾರಿದ ಆಸಾಮಿ

Hindu neighbor gifts plot of land

Hindu neighbour gifts land to Muslim journalist

ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66 ಎಕ್ಸ್‌ಪ್ರೆಸ್ ಹೈವೇಯಲ್ಲಿ ಟ್ಯಾಂಕರ್ ನಿಲ್ಲಿಸಿ ಚಾಲಕನೊಬ್ಬ ನಿದ್ದೆಗೆ ಜಾರಿದ್ದಾನೆ. ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಿ ದೀಪವನ್ನು ಬೆಳಗಿಸಿಕೊಂಡು ಆತ ನಿದ್ರೆಗೆ ಜಾರಿದ್ದ. ಇದೀಗ ಆತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಚಾಲಕ ತಂಜಾವೂರಿನ ಚಾಲಕ ಬಾಲಸುಬ್ರಹ್ಮಣ್ಯನ್ (48) ಕುಂಬಳೆ ಮಾವಿನಕಟ್ಟೆ ಬಳಿ ಶುಕ್ರವಾರ ಹೆದ್ದಾರಿಯ ಮಧ್ಯೆ ಚಾಲಕನ ಆಸನದಲ್ಲೇ ನಿದ್ದೆಗೆ ಜಾರಿದ್ದ. ಮದ್ಯದ ಅಮಲಿನಲ್ಲಿ ಆತ ನಿದ್ದೆಗೆ ಶರಣಾಗಿದ್ದ ಎನ್ನಲಾಗುತ್ತಿದೆ. ಅಲ್ಲದೆ ಆತ ಲಾರಿಯನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವುದು ಕೂಡಾ ರಾ.ಹೆ. ಪ್ರಾಧಿಕಾರದ ಕೆಮರಾದಲ್ಲಿ ಸೆರೆಯಾಗಿತ್ತು. ಇದೀಗ ಪ್ರಾಧಿಕಾರದ ಅಧಿಕಾರಿಗಳು ನೀಡಿದ ಮಾಹಿತಿಯನುಸಾರ ಪೊಲೀಸರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮಗನಿಗೆ 18 ವರ್ಷಕ್ಕೆ 1 ದಿನ ಬಾಕಿ ಶತ್ರುವಿನ ಕೊಲೆ ಮಾಡಿಸಿದ ಅಪ್ಪ!