ಮಗನಿಗೆ 18 ವರ್ಷಕ್ಕೆ 1 ದಿನ ಬಾಕಿ ಶತ್ರುವಿನ ಕೊಲೆ ಮಾಡಿಸಿದ ಅಪ್ಪ!

Share the Article

ಹೊಸದಿಲ್ಲಿ: ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ತನ್ನ ಅಪ್ರಾಪ್ತ ವಯಸ್ಸಿನ ಮಗನ ಕೈಯಿಂದ ಅಪ್ಪನೇ ಕೊಲೆ ಮಾಡಿಸಿರುವ ಘಟನೆ ದಿಲ್ಲಿಯ ಮಾಳವೀಯ ನಗರದಲ್ಲಿ ನಡೆದಿದೆ. ವಿಶೇಷವೆಂದರೆ, ಮಗನಿಗೆ 18 ವರ್ಷ ತುಂಬಲು 1 ದಿನ ಬಾಕಿಯಿರುವಂತೆಯೇ ಆತನ ಅಪ್ಪ ಖುಷಿ ರಾಮ್ ತನ್ನ ಮಗನ ಕೈಲಿ ಈ ಕೊಲೆ ಮಾಡಿಸಿದ್ದಾನೆ. ಹೀಗಾಗಿ ಬಾಲಾಪರಾಧ ಕಾನೂನಿನಡಿಯಲ್ಲಿ ಆರೋಪಿ ಬಾಲಕ ಶಿಕ್ಷೆ ಎದುರಿಸಲಿದ್ದಾನೆ.

ಅತ್ತ ಮಗನ ಕೈಯಿಂದ ತನ್ನ ಶತ್ರುವಿಗೆ ಶಿಕ್ಷೆ ಆಗಬೇಕು, ಆದರೆ ಮಗನನ್ನು ದೊಡ್ಡ ಮಟ್ಟದ ಶಿಕ್ಷೆಯಿಂದ ಪಾರು ಮಾಡುವ ಕುತಂತ್ರವನ್ನು ಖುಷಿ ರಾಮ್ ಹೂಡಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಲಜಪತ್ ಸಿಂಗ್ (56) ಎಂಬಾತನ ವಿರುದ್ದ ಹೊಂದಿದ್ದ ಹಳೆ ದ್ವೇಷ ಸಾಧನೆಗಾಗಿ ಕ್ರಿಕೆಟ್ ಬ್ಯಾಟ್, ಬಂದೂಕು ಬಳಸಿ ಹತ್ಯೆಗೈದಿದ್ದಾಗಿ ಕ್ರಿಮಿನಲ್ ತಂದೆ – ಮಗ ಇದೀಗ ಪೊಲೀಸರೆದುರು ತಪ್ರೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:Arattai Messenger: ಹರಟೆಗೆ ಬಂತು ಸ್ವದೇಶಿ ವಾಟ್ಸ್ಆ್ಯಪ್ ‘ಅರಟ್ಟೈ’; ಏಕಾಏಕಿ ಜನಪ್ರಿಯತೆ ಪಡಕೊಂಡ ಸ್ವದೇಶಿ ಆ್ಯಪ್!

Comments are closed.