LPG: ‘LPG ಸಿಲಿಂಡರ್’ ಡೆಲಿವರಿಗೆ ಹೆಚ್ಚಿನ ಹಣ ಕೇಳಿದ್ರೆ ಸಂಖ್ಯೆಗೆ ದೂರು ನೀಡಿ

Share the Article

LPG: ಅಡುಗೆ ಅನಿಲದ ( LPG) ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಕೇವಲ ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ.

ಸರ್ಕಾರದ ಆದೇಶ ಸಂಖ್ಯೆ FCS 163 Epp 2025 ಬೆಂಗಳೂರು ದಿನಾಂಕ 06-09-2006 ರಲ್ಲಿ ಈ ಕೆಳಗಿನಂತೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಗೆ ನಾಗರಿಕ ತಿದ್ದುಪಡಿಯಲ್ಲಿ ನಿಗಧಿಪಡಿಸಿರುವಂತೆ 5.00 ಕಿ.ಮೀ.ವರೆಗೆ ಉಚಿತ (ಯಾವುದೇ ಶುಲ್ಕವಿಲ್ಲ). ಇನ್ನು 5 ಕಿ.ಮೀ. ಮೀರಿದ ಪ್ರತಿ ರೌಂಡ್ ಟ್ರಿಪ್ ಕಿ.ಮೀ.ಗೆ- ಪ್ರತಿ ಸಿಲಿಂಡರ್ಗೆ ರೂ.1.60 (ರೂ. ಒಂದು ರೂಪಾಯಿ ಅರವತ್ತು ಪೈಸೆ ಮಾತ್ರ)

ಇದನ್ನೂ ಓದಿ:School: ದಸರಾ ರಜೆ ಮುಗಿಯುವ ಮುನ್ನವೇ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್‌ ನ್ಯೂಸ್‌

ಒಂದು ವೇಳೆ ಸಿಲಿಂಡರನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ವ್ಯಕ್ತಿ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದಲ್ಲಿ, ಜಂಟಿ ನಿರ್ದೇಶಕರ ಕಛೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾರ್ಯಾಲಯಕ್ಕೆ ಹಾಗೂ ಕಛೇರಿಯ ದೂರವಾಣಿ ಸಂಖ್ಯೆ 08172-268229 ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರರ ಕಛೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಲು ತಿಳಿಸಲಾಗಿದೆ.

Comments are closed.