E-mail: ನಿಮ್ಮ ಇ-ಮೇಲ್ ಸ್ಟೋರೇಜ್ ಫುಲ್ ಆಗಿದ್ಯಾ? ಜಸ್ಟ್ ಹೀಗೆ ಮಾಡಿ, ಒಟ್ಟಿಗೆ ಕ್ಲಿಯರ್ ಕೊಡಿ

E-mail: ಇಂದು ಹೆಚ್ಚಿನವರ ಮೊಬೈಲ್ ಗಳು ಇ-ಮೇಲ್ ಗೆ ಲಿಂಕ್ ಆಗಿ ಅದರ ಮುಖಾಂತರವೇ ನಿರ್ವಹಿಸುತ್ತವೆ. ಅಲ್ಲದೆ ಫೋಟೋ ವಿಡಿಯೋ ಹಾಗೂ ಇತರ ಡಾಕ್ಯುಮೆಂಟ್ಗಳು ಕೂಡ ಇದರಲ್ಲಿಯೇ ಸೇವ್ ಆಗುತ್ತದೆ. ಆದರೆ ಇ-ಮೇಲ್ ಐಡಿಗಳಲ್ಲಿ ಸ್ಟೋರೇಜ್ ತುಂಬಾ ಕಡಿಮೆ ಇರುತ್ತದೆ. ಫೋಟೋ ವಿಡಿಯೋ ನಂಬರ್ ಗಳು ಸೇರಿದಂತೆ ಬೇರೆ ಬೇರೆ ಡಾಕ್ಯೂಮೆಂಟ್ ಗಳು ಇದರಲ್ಲಿ ಸೇವ್ ಆಗುವ ಕಾರಣ ಅದು ಬೇಗನೆ ಫುಲ್ ಆಗಿಬಿಡುತ್ತದೆ. ಹೀಗಾಗಿ ಈ ಮೇಲ್ ಸ್ಟೋರೇಜ್ ಫುಲ್ ಎಂಬ ಮೆಸೇಜುಗಳು ಪದೇ ಪದೇ ಮೊಬೈಲ್ ನಲ್ಲಿ ಕಾಣಿಸುತ್ತವೆ. ಇದು ಒಂದು ರೀತಿಯ ಕಿರಿಕಿರಿಯನ್ನು ಕೂಡ ಉಂಟು ಮಾಡುವುದುಂಟು. ಹಾಗಾದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಮಾಡುವುದರ ಮೂಲಕ ನೀವು ನಿಮ್ಮ ಇ-ಮೇಲ್ ಸ್ಟೋರೇಜ್ ಅನ್ನು ಫ್ರೀ ಮಾಡಿಕೊಳ್ಳಬಹುದು.

ಹೌದು, ಇ-ಮೇಲ್ ಅಥವಾ ಜಿಮೇಲ್ ನಲ್ಲಿ ನೀವು ಒಂದೇ ಬಾರಿಗೆ 50 ಮೇಲ್ಗಳನ್ನು ಮಾತ್ರ ಡಿಲೀಟ್ ಮಾಡಬಹುದು. ಆದರೆ ನೀವು ಎಲ್ಲವನ್ನು ಒಟ್ಟಿಗೆ ಡಿಲೀಟ್ ಮಾಡಲು ಬಯಸಿದರೆ, ಹೀಗೆ ಮಾಡಿ. ಜಿಮೇಲ್ ಡೆಸ್ಕ್ಟಾಪ್ ಆವೃತ್ತಿಗೆ ಹೋಗಿ ಮತ್ತು ಮೇಲ್ ಹುಡುಕಾಟ ಪಟ್ಟಿಯಲ್ಲಿ ‘is:unread’ ಎಂದು ಟೈಪ್ ಮಾಡಿ. ನಂತರ ‘ಎಲ್ಲವನ್ನೂ ಆಯ್ಕೆಮಾಡಿ’ ಮೇಲೆ ಕ್ಲಿಕ್ ಮಾಡಿ ಮತ್ತು 50 ಮೇಲ್ಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗ ಅದರ ಪಕ್ಕದಲ್ಲಿ ಕಾಣಿಸಿಕೊಳ್ಳುವ ‘ಈ ಹುಡುಕಾಟಕ್ಕೆ ಹೊಂದಿಕೆಯಾಗುವ ಎಲ್ಲಾ ಸಂಭಾಷಣೆಗಳನ್ನು ಆಯ್ಕೆಮಾಡಿ’ ಮೇಲೆ ಕ್ಲಿಕ್ ಮಾಡಿ.. ಎಲ್ಲಾ ಓದದಿರುವ ಮೇಲ್ಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಲಾಗುತ್ತದೆ. ನಂತರ ಅಳಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದು ‘ದೃಢೀಕರಿಸಿ’ ಎಂದು ಕೇಳುತ್ತದೆ. ‘ಸರಿ’ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಓದದಿರುವ ಮೇಲ್ಗಳನ್ನು ಡಿಲೀಟ್ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯಲು ಎರಡರಿಂದ ಮೂರು ನಿಮಿಷಗಳು ಬೇಕಾಗಬಹುದು.
ಇದನ್ನೂ ಓದಿ:Sports: ‘ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್‌ಶಿಪ್’ನಲ್ಲಿ ಚಿನ್ನ ಗೆದ್ದ ಶೀತಲ್ ದೇವಿ
ಅಲ್ಲದೆ ನೀವು Gmail ನಲ್ಲಿನ ಸರ್ಚಿಂಗ್ ಫಿಲ್ಟರ್ ಆಧರಿಸಿ ಮೇಲ್ಗಳನ್ನು ಬೃಹತ್ ಪ್ರಮಾಣದಲ್ಲಿ ಅಳಿಸಬಹುದು. ನೀವು ಹುಡುಕಾಟ ಪಟ್ಟಿಯಲ್ಲಿ ಫೈಲ್ ಗಾತ್ರವನ್ನು ನಮೂದಿಸಿದರೆ, ಉದಾಹರಣೆಗೆ 10MB, 20MB.. ಹೀಗೆ.. ದೊಡ್ಡ ಫೈಲ್ಗಳನ್ನು ಹೊಂದಿರುವ ಮೇಲ್ಗಳು ಕಾಣಿಸಿಕೊಳ್ಳುತ್ತವೆ. ನೀವು ಅವುಗಳನ್ನು ಆಯ್ಕೆ ಮಾಡಿ ಅಳಿಸಬಹುದು.
Comments are closed.