Puttur : ಬಿಜೆಪಿ ಮುಖಂಡನ ಪುತ್ರನಿಂದ ಲವ್-ಸೆಕ್ಸ್-ದೋಖಾ ಕೇಸ್ ಗೆ ಬಿಗ್ ಟ್ವಿಸ್ಟ್ – DNA ವರದಿಯಲ್ಲಿ ಬಯಲಾಯ್ತು ನಿಜ ರಹಸ್ಯ

Puttur : ಕರಾವಳಿಯಾದ್ಯಂತ ಸದ್ದು ಮಾಡಿದ್ದ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಜಾಂಶ ಬಯಲಾಗಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ (BJP) ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ ಆರೋಪಿ ಕೃಷ್ಣ ಜೆ.ರಾವ್ (Krishna J Rao) ಎಂಬುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ.
ಯುವತಿಗೆ ಕೈಕೊಟ್ಟು ಪರಾರುಯಾಗಿದ್ದ ಕೃಷ್ಣ ಜೆ ರಾವ್, ತಾನು ಮಗುವಿನ ತಂದೆ ಎಂಬುದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಯುವತಿಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕೋರ್ಟ್ ನಲ್ಲಿ ಆರೋಪಿ ಕೃಷ್ಣ ಜೆ ರಾವ್ ನ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ರವಾನಿಸಿದ್ದರು. ಇದೀಗ ಡಿಎನ್ ಎ ವರದಿ ಬಂದಿದ್ದು, ವರದಿಯಲ್ಲಿ ಆರೋಪಿ ಕೃಷ್ಣ ಜೆ ರಾವ್ ನೇ ಮಗುವಿನ ತಂದೆ ಎಂಬುದು ಸಾಬೀತಾಗಿದೆ.
ಇದೀಗ ಕೃಷ್ಣ ನಮ್ಮ ಹುಡುಗಿಯನ್ನು ಮದುವೆಯಾಗಬೇಕು, ಮಗುವಿಗೆ ತಂದೆಯಾಗಬೇಕು ಎಂದು ಯುವತಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹಿಂದೂ ಸಂಘಟನೆಗಳು ಮುಂದೆ ಬಂದು ಇಬ್ಬರಿಗೆ ಮದುವೆ ಮಾಡಿಸಬೇಕು. ಯುವತಿ ಮತ್ತು ಮಗುವಿಗೆ ನ್ಯಾಯ ಕೊಡಿಸಬೇಕು ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆಪಿ ನಂಜುಂಡಿ ಆಗ್ರಹಿಸಿದ್ದಾರೆ.
Comments are closed.