Bar: ಹೊಸ ಬಾರ್ ಓಪನ್ ಮಾಡುವ ಆಲೋಚನೆ ಇದ್ಯಾ? ಎಷ್ಟು ಖರ್ಚಾಗುತ್ತೆ? ಲೈಸೆನ್ಸ್ ಪಡೆಯಲು ಏನೆಲ್ಲ ಬೇಕು?

Bar: ಯಾವುದೇ ವ್ಯಾಪಾರದಲ್ಲಿಯೂ ಕಲಾಸ್ ಆಗಬಹುದು, ಆದರೆ ಬಾರ್ ತೆರೆದರೆ ಎಂದಿಗೂ ಕೂಡ ಅದು ನಷ್ಟವಾಗದು ಎಂದು ಹೇಳುವ ಮಾತಿದೆ. ಇದೇ ಕಾರಣಕ್ಕೆ ಎಂತಹ ಶ್ರೀಮಂತರಾಗಿರಲಿ ಉದ್ಯಮಿಗಳಾಗಿರಲಿ ಬಾರ್ ತೆಗೆಯಲು ಮುಂದಾಗಿರುತ್ತಾರೆ. ಹಾಗಾದರೆ ನಿಮಗೆ ಹೊಸ ಬಾರು ಓಪನ್ ಮಾಡುವ ಆಲೋಚನೆ ಏನಾದರೂ ಇದೆಯೇ? ಹೇಗಿದ್ದರೆ ಇದಕ್ಕೆ ಎಷ್ಟು ಖರ್ಚಾಗುತ್ತದೆ? ಲೈಸೆನ್ಸ್ ಪಡೆಯಲು ಏನೆಲ್ಲ ಮಾಡಬೇಕು? ಈ ಕುರಿತಾಗಿ ಇದೀಗ ಸರ್ಕಾರವು ಮಾಹಿತಿ ಹಂಚಿಕೊಂಡಿದ್ದು, ಬಾರ್ ತೆರೆಯಬೇಕೆಂಬ ಆಲೋಚನೆ ಇರುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಬಾರ್ ಲೈಸೆನ್ಸ್ ಪಡೆಯುವ ವಿಚಾರವಾಗಿ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ರಾಜ್ಯ ಹಣಕಾಸು ಇಲಾಖೆಯು ನಿಷ್ಕ್ರಿಯ ಅಬಕಾರಿ ಪರವಾನಗಿಗಳನ್ನು ಹರಾಜು ಮಾಡಲು ಮುಂದಾಗಿದ್ದು, ಈ ಸಂಬಂಧ ಕರಡು ನಿಯಮಗಳನ್ನು ಸಹ ಹೊರಡಿಸಿದೆ. ಹಣಕಾಸು ಇಲಾಖೆಯು ಸದ್ಯ ಬಾಕಿ ಉಳಿದಿರುವ ಅಬಕಾರಿ ಲೈಸೆನ್ಸ್‌ಗಳನ್ನ ಹರಾಜು ಮಾಡುವ ಕುರಿತು ಕರಡು ನಿಯಮಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಸರ್ಕಾರವು ಈ ಮೂಲಕ ತನ್ನ ಹಣಕಾಸಿನ ಒತ್ತಡದ ನಡುವೆಯೂ ಸುಮಾರು 500 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ ಎನ್ನಲಾಗಿದೆ.
ಒಂದು ಲೈಸೆನ್ಸ್‌ಗೆ ಎಷ್ಟು ಖರ್ಚಾಗುತ್ತೆ?
1992ರಿಂದಲೂ ರಾಜ್ಯದಲ್ಲಿ ಹೊಸ CL-2 ಮತ್ತು CL-9 ಲೈಸೆನ್ಸ್‌ಗಳನ್ನು ನೀಡಿಲ್ಲ. ಬರೋಬ್ಬರಿ 3,995 CL-2 ಹಾಗೂ 3,637 CL-9 ಲೈಸೆನ್ಸ್‌ಗಳು ಲಭ್ಯವಿದ್ದು, ಇವುಗಳನ್ನು ಪ್ರತಿ ವರ್ಷ ನವೀಕರಿಸಲಾಗುತ್ತಿದೆ. ಈ ಹೊಸ ಲೈಸೆನ್ಸ್‌ಗಳ ಸ್ಥಗಿತದಿಂದಾಗಿ ಈಗಿರುವ ಲೈಸೆನ್ಸ್‌ಗಳು ದುಬಾರಿ ಬೆಲೆಗೆ ಮಾರಾಟ ಆಗುತ್ತವೆ. ಒಂದು ಲೈಸೆನ್ಸ್ ಪಡೆಯಲು ಕೋಟಿ ಕೋಟಿ ಖರ್ಚು ಮಾಡಬೇಕಾಗುತ್ತದೆ. ಸರ್ಕಾರ ಈ ಲೈಸೆನ್ಸ್‌ಗಳಿಗೆ ವಾರ್ಷಿಕ ಶುಲ್ಕ ಸಂಗ್ರಹಿಸುತ್ತವೆ. ಮೂಲಗಳ ಪ್ರಕಾರ CL-2 ಲೈಸೆನ್ಸ್‌ಗೆ ವಾರ್ಷಿಕ ಶುಲ್ಕ 4ರಿಂದ 6 ಲಕ್ಷ ರೂಪಾಯಿ, CL-9 ಲೈಸೆನ್ಸ್‌ಗೆ 7.5 ಲಕ್ಷ ರೂವರೆಗೆ ಶುಲ್ಕ ಇದೆ ಎನ್ನಲಾಗಿದೆ.
ಇದನ್ನೂ ಓದಿ:Garlic: ಬೆಳ್ಳುಳ್ಳಿ ಸಿಪ್ಪೆ ಈ ಸಮಸ್ಯೆಗಳಿಗೆ ರಾಮಬಾಣ
ಬೆಂಗಳೂರು ಭಾಗದಲ್ಲಿ ಒಂದು ಲೈಸೆನ್ಸ್ ಅನ್ನು 3.8 ಕೋಟಿ ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಹರಾಜಿನಲ್ಲಿ ಪ್ರತಿ ಲೈಸೆನ್ಸ್‌ಗೆ 3 ಕೋಟಿ ರೂ.ಗಳವರೆಗೆ ದರ ನಿಗದಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಹೊರಭಾಗದ ಲೈಸೆನ್ಸ್‌ಗಳು 1 ಕೋಟಿ ರೂ.ಗಳವರೆಗೆ ಮಾರಾಟ ಆಗಬಹುದು. ಒಟ್ಟಾರೆ ಈ ಹರಾಜಿನಿಂದ ಸುಮಾರು 500 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಬಾರ್ ಲೈಸೆನ್ಸ್ ಪಡೆಯಬೇಕು ಎಂದು ವರ್ಷಗಳಿಂದ ಕಾದಿದ್ದವರಿಗೆ ಇದೀಗ ಸುವರ್ಣವಕಾಶ ಒದಗಿ ಬಂದಿದೆ.
Comments are closed.