Air India Mangalore: ಮಂಗಳೂರು: ದುಬೈಗೆ ತೆರಳಬೇಕಿದ್ದ ಏರ್‌ಇಂಡಿಯಾ ವಿಮಾನ ಹಾರಾಟ ರದ್ದು

Air India Mangalore: ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್‌ಇಂಡಿಯಾ ವಿಮಾನದ ಹಾರಾಟ ತಾಂತ್ರಿಕ ದೋಷದ ಕಾರಣದಿಂದ ರದ್ದಾಗಿದ್ದು, ಇದರ ಪರಿಣಾಮ ಪ್ರಯಾಣಿಕರು ಪರದಾಡಿರುವ ಘಟನೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಬೆಳಗ್ಗೆ 8.50 ಕ್ಕೆ ವಿಮಾನ ಹಾರಾಟ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಸಿಬ್ಬಂದಿ ಕೂರಿಸಿದ್ದರು, ನಂತರ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ.
ಮಧ್ಯಾಹ್ನ 3.30 ಕ್ಕೆ ಫ್ಲೈಟ್ ಟೇಕಾಫ್ ಆಗಲಿದೆ ಎನ್ನುವ ಮಾಹಿತಿ ಕೊಟ್ಟಿದ್ದರೂ ಬಹಳ ಸಮಯ ಕಳೆದರೂ ಯಾವುದೇ ಮಾಹಿತಿ ದೊರಕದೆ ಪ್ರಯಾಣಿಕರು ಮತ್ತೆ ಈ ಕುರಿತು ವಿಚಾರಿಸಿದಾಗ, ಬೇರೆಯದ್ದೇ ಸಮಯ ಹೇಳಿರುವ ಏರ್‌ಪೋರ್ಟ್ ಸಿಬ್ಬಂದಿ, ನಂತರ ಕೊನೆಯದಾಗಿ ಸಂಜೆ 6 ಗಂಟೆಗೆ ಸಮಯ ನೀಡಿ, ವಿಮಾನ ಹಾರಾಟ ರದ್ದು ಮಾಡಲಾಗಿದೆ ಎಂದು ಹೇಳಿದರು.
ಏರ್‌ಇಂಡಿಯಾ ವಿಮಾನದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ಸಮಸ್ಯೆಗಳಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.