Home News Bantwala: ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಯುವಕ ಸಾವು

Bantwala: ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಯುವಕ ಸಾವು

Hindu neighbor gifts plot of land

Hindu neighbour gifts land to Muslim journalist

Bantwala: ಯುವಕನೊಬ್ಬ ಆಕಸ್ಮಿಕವಾಗಿ ನೀರು ತುಂಬಿದ್ದ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸೆ.20 ರ ಶನಿವಾರ ಸಜೀಪದ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ.

ಅಬ್ದುಲ್‌ ಅಮೀರ್‌ (23) ಮೃತಪಟ್ಟ ಯುವಕ.

ಅಮೀರ್‌ ಕೂಲಿ ಕೆಲಸ ಮಾಡುತ್ತಿದ್ದು, ಸೆ.20 ರಂದು ಸಂಜೆ ಶಂಶೀರ್‌, ಇಕ್ಬಾಲ್‌ ಮತ್ತು ರಿಜ್ವಾನ್‌ ಜೊತೆ ಸಜೀಪಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕೆಲಸಕ್ಕೆಂದು ಹೋಗಿದ್ದು, ಸಂಜೆ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿದ್ದ ನೀರು ತುಂಬಿದ್ದ ಹೊಂಡಕ್ಕೆ ಕೈಕಾಲು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ;ಮಂಡೋದರಿ ಪಾತ್ರಕ್ಕೆ ನಟಿ ಪೂನಂ ಪಾಂಡೆ ವಿಚಾರ; ಪುರಾಣದ ಪಂಚ ಪತಿವೃತೆಯರು ಯಾರು?

ಕೂಡಲೇ ಅಮೀರ್‌ನಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತ ಹೊಂದಿದ್ದರು. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.