Mangalore: ಮಂಗಳೂರು: ಚಾಯ್ಸ್ ಗೋಲ್ಡ್ ಇದರ ʼಸಾರಾ ಡೈಮಂಡ್ಸ್ʼ ಶುಭಾರಂಭ

Share the Article

Mangalore: ಮಂಗಳೂರು(Mangalore) ನಗರದ ಹಂಪನಕಟ್ಟೆಯ ಆಲ್ಫಾ ಟವರ್‌ನಲ್ಲಿರುವ ಚಾಯ್ಸ್ ಗೋಲ್ಡ್ (ಗೋಲ್ಡ್ ಆ್ಯಂಡ್ ಡೈಮಂಡ್ಸ್) ಇದರ ʼಸಾರಾ ಡೈಮಂಡ್ಸ್ʼ ಮಳಿಗೆಯು ಶುಕ್ರವಾರ ಶುಭಾರಂಭಗೊಂಡಿತು.

ಈ ಸಂದರ್ಭ ಸೆ.28ರವರೆಗೆ ನಡೆಯುವ ಜಾಯ್ಸ್ ಡೈಮಂಡ್ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಯುವ ಉದ್ಯಮಿಗಳ ಪಾತ್ರ ಅಪಾರವಿದೆ. ಮುಂದೆಯೂ ಯುವ ಉದ್ಯಮಿಗಳು ನಗರದ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ನುಹ್‌ಮಾನ್ ಎನ್.ಎಸ್., ದ.ಕ.ಜಿಪಂ ಮಾಜಿ ಸದಸ್ಯ ಎನ್.ಎಸ್. ಕರೀಂ ಮಂಜನಾಡಿ, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ, ಮಂಗಳೂರಿನ ಮ್ಯಾಕ್‌ ಓವರ್ ನಿಶಾಝ್, ಉದ್ಯಮಿ ಇಬ್ರಾಹೀಂ ದೋಹ ಜಲಾಲ್‌ಬಾಗ್, ಆಲ್ಫಾ ಟವರ್‌ನ ಲುತ್ಫುಲ್ಲಾ ಖಾಝಿ, ಥೀಮ್ಸ್ ಡಿಸೈನರ್ ರೇಶ್ಮಾ ತೋಟ, ಪುತ್ತೂರು ದರ್ಬೆಯ ಏಶಿಯನ್ ವುಡ್ ಆ್ಯಂಡ್ ಇಂಡಸ್ಟ್ರೀಸ್‌ನ ಇಸ್ಮಾಯೀಲ್, ಉದಯೋನ್ಮುಖ ಕಲಾವಿದೆ ತೃಪ್ತಿ ಜನಾರ್ದನ್, ಎಸ್.ಕೆ.ಖಾದರ್ ಹಾಜಿ ಮುಡಿಪು, ಡಾ. ಧೀರಜ್‌ಕುಮಾರ್ ವಿ., ಡಾ.ರಶ್ಮಿ ಶೆಟ್ಟಿ, ಬದ್ರುದ್ದೀನ್ ಪುತ್ತಿಗೆ ಮತ್ತಿತರರು ಭಾಗವಹಿಸಿದ್ದರು.

ಚಾಯ್ಸ್ ಗೋಲ್ಡ್ ನ ಆಡಳಿತ ಪಾಲುದಾರರಾದ ಶಹೀರ್‌ ಬಿಎಂ ಸ್ವಾಗತಿಸಿದರು, ಅಶ್ರಫ್ ನಾಡಾಜೆ ವಂದಿಸಿದರು. ದಿವಾಕರ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.

ಶುಭಾರಂಭದ ಪ್ರಯುಕ್ತ ಪ್ರತೀ ಡೈಮಂಡ್ ಕ್ಯಾರೆಟ್ ಖರೀದಿಯ ಮೇಲೆ 20 ಸಾವಿರ ರಿಯಾಯಿತಿ ನೀಡಲಾಗು ವುದು. 2 ಕ್ಯಾರೆಟ್‌ಗಿಂತ ಅಧಿಕ ಖರೀದಿ ಮಾಡಿದಲ್ಲಿ 5 ಸಾವಿರ ರೂ. ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಪ್ರತೀ ಡೈಮಂಡ್ ಖರೀದಿಯೊಂದಿಗೆ ಡಿಸ್ಕೌಂಟ್ ವೋಚರ್ ನೀಡಲಾಗುವುದು. ಪ್ರತೀ ಖರೀದಿಗೆ ಉಚಿತ ಉಡುಗೊರೆ ನೀಡಲಾಗುವುದು, ಸೆ.19ರಿಂದ ಸೆ.28ರವರೆಗೆ ರಿಯಾಯಿತಿ ಕೊಡುಗೆ ಇದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ.‌‌

ಇದನ್ನೂ ಓದಿ:DK Shivkumar : ಡಿಕೆಶಿ ಎಚ್ಚರಿಕೆಗೆ ಬೆದರಿದ ಕಂಪೆನಿಗಳು – ‘ಬೆಂಗಳೂರು ನಮ್ಮನೆ, ಬೇರೆ ಏರಿಯಾಗೆ ಹೋದೆ ಸುಮ್ಮನೆ’ ಎಂದ BlackBuck CEO

Comments are closed.