Vastu Tips: ಸಂಪತ್ತು ಹೆಚ್ಚಿಸಲು ಈ ವಸ್ತುಗಳು ಮನೆಯಲ್ಲಿಡಿ

Vastu Tips: ಸಂಪತ್ತು ಹೆಚ್ಚಿಸಲು ವಾಸ್ತು ಪ್ರಕಾರ ಕೆಲವು ಪರಿಹಾರ ಗಳಿವೆ. ಹೌದು, ಕೆಲವರು ಎಷ್ಟೇ ದುಡಿದರು ಮನೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಆಗುವುದಿಲ್ಲ. ಅದಕ್ಕಾಗಿ ಕೆಲವೊಮ್ಮೆ ವಾಸ್ತುವಿನ ಮೊರೆ ಹೋಗಬೇಕಾಗುತ್ತೆ. ಆದ್ದರಿಂದ ಮನೆಯಲ್ಲಿ ಯಾವ ವಸ್ತು ಇಟ್ಟರೆ ಸಂಪತ್ತು ಹೆಚ್ಚಿಸುತ್ತೆ ಅನ್ನೋದು ಇಲ್ಲಿ ತಿಳಿಸಲಾಗಿದೆ.

1. ಲೋಹದ ಆನೆ
ಲೋಹದಿಂದ ಮಾಡಿದ ಆನೆ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ನಾಶಪಡಿಸುತ್ತದೆ. ಹಾಗೆಯೇ ಈ ಪ್ರತಿಮೆಯು ಶಕ್ತಿ, ಸಮೃದ್ಧಿ ಮತ್ತು ಒಳ್ಳೆಯ ಅದೃಷ್ಟವನ್ನು ತರುತ್ತದೆ. ಆನೆಯನ್ನು ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಒಳ ಮುಖವಾಗಿ ಇರಿಸಬೇಕು.
2. ತುಳಸಿ ಗಿಡ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡ ಇಡುವುದರಿಂದ ಸಕರಾತ್ಮಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯ ಒಳಾಂಗಣ ಅಥವಾ ಮನೆಯ ಹೊರಾಂಗಣದಲ್ಲಿ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿರಿ. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಸಮೃದ್ಧಿಯಾಗುತ್ತವೆ.
3. ಲೋಹದ ಆಮೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲೋಹದ ಆಮೆ ಇಡುವುದರಿಂದ ಸ್ಥಿರತೆ, ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ತರುತ್ತದೆ. ಆಮೆಯನ್ನು ಈಶಾನ್ಯ ದಿಕ್ಕಿನಲ್ಲಿ, ಶುದ್ಧವಾದ ಸ್ಥಳದಲ್ಲಿ ಇಡಬೇಕು. ಹಿತ್ತಾಳೆ, ಕಂಚು ಅಥವಾ ಬೆಳ್ಳಿಯಿಂದ ಮಾಡಿದ ಆಮೆಯನ್ನು ಖರೀದಿಸಿ ಮನೆಯಲ್ಲಿ ಇಡುವುದು ಶುಭ ಎಂದು ಹೇಳಲಾಗುತ್ತದೆ.
4. ಬುದ್ಧನ ಪ್ರತಿಮೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬುದ್ಧನ ಪ್ರತಿಮೆ ಇಡುವುದು ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲು ಸಹಾಯ ಮಾಡುತ್ತದೆ. ಈ ಪ್ರತಿಮೆಯನ್ನು ಈಶಾನ್ಯ ದಿಕ್ಕಿನಲ್ಲಿ, ಸ್ವಚ್ಛವಾದ, ಶಾಂತವಾದ ಸ್ಥಳದಲ್ಲಿ ಇಡಬೇಕು. ಬುದ್ಧನ ಮುಖ ಒಳಗಿನ ಕಡೆಗೆ ಇರಬೇಕು.
5. ತೆಂಗಿನಕಾಯಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತೆಂಗಿನಕಾಯಿ ಇಡುವುದು ಸಮೃದ್ಧಿ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಈ ತೆಂಗಿನಕಾಯಿಯನ್ನು ಈಶಾನ್ಯ ದಿಕ್ಕಿನಲ್ಲಿ, ಪೂಜಾ ಸ್ಥಳದಲ್ಲಿ ಇರಿಸಬೇಕು. ಕಾಯಿಯನ್ನು ಕುಂಕುಮ, ಅಕ್ಷತೆಯಿಂದ ಅಲಂಕರಿಸಿ ಇಡಬೇಕು.
6. ನವಿಲು ಗರಿ
ವಾಸ್ತು ಶಾಸ್ತ್ರದ ಪ್ರಕರ ನವಿಲು ಗರಿಯನ್ನು ಮನೆಯಲ್ಲಿ ಇಡಬೇಕು. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಕಾರಣ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀ ದೇವಿಯು ವಾಸಿಸುತ್ತಾಳೆ ಎಂದು ನಂಬಲಾಗಿದೆ.
Comments are closed.