Pension: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆ ಆಯ್ಕೆಗೆ ಸೆ.30 ಕೊನೆ ದಿನ

Share the Article

Pension: ಕೇಂದ್ರ ಸರ್ಕಾರದ ನೌಕರರು ಏಕೀಕೃತ ಪಿಂಚಣಿ (Pension) ವ್ಯವಸ್ಥೆಯನ್ನು (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಸೆ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ತನ್ನ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (UPS) ಆಯ್ಕೆಯನ್ನು ನೀಡಿದೆ. ಈಗಾಗ್ಲೇ ಜುಲೈ 20ರವರೆಗೆ 31,555 ನೌಕರರು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್‌) ಆಯ್ಕೆ ಮಾಡಿದವರು ಸೆ.30ರ ನಂತರ ಮತ್ತೆ ಏಕೀಕೃತ ಪಿಂಚಣಿ ವ್ಯವಸ್ಥೆಗೆ (ಯುಪಿಎಸ್‌) ಬರಲು ಅವಕಾಶ ಇಲ್ಲ ಎಂದು ತಿಳಿಸಿದೆ.

ಇನ್ನು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡವರು ನಿವೃತ್ತಿಗೆ ಒಂದು ವರ್ಷ ಮೊದಲು ಅಥವಾ ಸ್ವಯಂ ನಿವೃತ್ತಿ ಪಡೆಯುವುದಿದ್ದರೆ ನಿವೃತ್ತಿಯ ದಿನಕ್ಕಿಂತ ಮೂರು ತಿಂಗಳು ಮೊದಲು ಎನ್‌ಪಿಎಸ್‌ಗೆ (NPS)ವರ್ಗಾವಣೆ ಆಗಬಹುದು’ ಎಂದು ಸಚಿವಾಲಯ ತಿಳಿಸಿದೆ.

Comments are closed.