Home Crime Chitturu: ಶಾಲೆಯಲ್ಲಿ ಬ್ಯಾಗ್ ನಿಂದ ವಿದ್ಯಾರ್ಥಿನಿ ತಲೆಗೆ ಹೊಡೆದ ಶಿಕ್ಷಕಿ – ಬಿರುಕು ಬಿಟ್ಟ ಬುರುಡೆ

Chitturu: ಶಾಲೆಯಲ್ಲಿ ಬ್ಯಾಗ್ ನಿಂದ ವಿದ್ಯಾರ್ಥಿನಿ ತಲೆಗೆ ಹೊಡೆದ ಶಿಕ್ಷಕಿ – ಬಿರುಕು ಬಿಟ್ಟ ಬುರುಡೆ

Hindu neighbor gifts plot of land

Hindu neighbour gifts land to Muslim journalist

Chitturu: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ತಲೆಗೆ ಹೊಡೆದಿದ್ದಾರೆ ಈ ವೇಳೆ ಆ ವಿದ್ಯಾರ್ಥಿನಿಯ ತಲೆ ಬುರುಡೆಯೇ ಬಿರುಕು ಬಿಟ್ಟಂತಹ ಅಚ್ಚರಿ ಘಟನೆ ನಡೆದಿದೆ.

ಹೌದು, ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ನಡೆದ ಈ ಘಟನೆ ಸೋಮವಾರ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಪಟ್ಟಣದ ಹರಿ ಮತ್ತು ವಿಜೇತಾ ದಂಪತಿಯ ಪುತ್ರಿ ಸಾತ್ವಿಕಾ ನಾಗಶ್ರೀ (11) ಸ್ಥಳೀಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಈ ವೇಳೆ ಆಕೆ ತರಗತಿಯಲ್ಲಿ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಶಿಕ್ಷಕಿ ಒಬ್ಬರು ಬ್ಯಾಗಿನಿಂದ ಆಕೆಯ ತಲೆಗೆ ಹೊಡೆದಿದ್ದಾರೆ.

ಇದನ್ನೂ ಓದಿ:Kantara -1: ʼಕಾಂತಾರ ಚಾಪ್ಟರ್‌ 1′ ರನ್‌ ಟೈಮ್‌ ರಿವೀಲ್‌ !!ಕಾಂತಾರಕ್ಕಿಂತ ಇದು ಹಿರಿದು

ನಾಗಶ್ರೀಗೆ ಕೆಲ ದಿನ ಈ ತಲೆನೋವು ಕಾಡಿದೆ. ಕಾರಣ ಮೂರು ದಿನಗಳಿಂದ ಆಕೆ ಶಾಲೆಗೆ ಹೋಗಿರಲಿಲ್ಲ. ಆದ್ದರಿಂದ ಪೋಷಕರು ಹುಡುಗಿಯನ್ನು ಪುಂಗನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬೆಂಗಳೂರಿಗೆ ಹೋಗಲು ಸಲಹೆ ನೀಡಿದರು. ಆದರೆ ಆಸ್ಪತ್ರೆಯಲ್ಲಿ ಎಲ್ಲಾ ಚಕಪ್ ಗಳು ನಡೆದ ಬಳಿಕ ಆಕೆಯ ತಲೆಯ ಬುರುಡೆ ಬಿರುಕು ಬಿಟ್ಟಿದೆ ಎಂಬ ಶಾಕಿಂಗ್ ಸತ್ಯ ಬಯಲಾಗಿದೆ. ಇದೀಗ ವಿದ್ಯಾರ್ಥಿನಿಯ ತಾಯಿ ಮತ್ತು ಸಂಬಂಧಿಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.