Kitchen Tips: ಅಡುಗೆಮನೆಯಲ್ಲಿ ಈ ವಸ್ತುಗಳಿದ್ರೆ ಹಾವು ಬರೋದು ಗ್ಯಾರಂಟಿ!

Share the Article

Kitchen Tips: ಹಾವು ಎಂದಾಗಲೇ ಮೈ ಜುಮ್ ಎನ್ನುತ್ತೆ. ಹಾಗಿರುವಾಗ ನಮ್ಮ ಮನೆ ಒಳಗೆ ಸೇರಿಕೊಂಡ್ರೆ ಕತೆ ಏನು? ಆದ್ರೆ ಒಂದು ಮಾತು ನೆನಪಿರಲಿ. ಸುಮ್ ಸುಮ್ನೆ ಹಾವು ಮನೆ ಪಕ್ಕಾ ಬರಲ್ಲ. ಹಾವುಗಳಿಗೆ ಆಕರ್ಷಣೆ ಆಗುವ ವಸ್ತು ಮತ್ತು ವಾತಾವರಣ ಇದ್ರೆ ಮಾತ್ರ ಬರುತ್ತೆ. ಅದಕ್ಕಾಗಿ ಮನೆ ಸುತ್ತ ಹಾವು ಸುಳಿಯದಂತೆ ನೋಡಿಕೊಳ್ಳೋದು ನಮ್ಮ ಜವಾಬ್ದಾರಿ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳು ಹಾವುಗಳನ್ನು ಬೇಗ ಆಕರ್ಷಿಸುತ್ತವೆ ಎಂಬುದನ್ನು ಆರೋಗ್ಯ ಹಾಗೂ ಸುರಕ್ಷತಾ ತಜ್ಞರು ಕಂಡುಕೊಂಡಿದ್ದಾರೆ. ಅದು ಯಾವುದೆಂದು (Kitchen Tips) ನೋಡೋಣ.

ಹಸಿ ಮೊಟ್ಟೆ, ಕೋಳಿ ಮತ್ತು ಮೀನುಗಳ ವಾಸನೆ:

ಅಡುಗೆಮನೆಯಲ್ಲಿ ಮೊಟ್ಟೆ, ಕೋಳಿ ಅಥವಾ ಮೀನು ಇದರ ಹಸಿ ವಾಸನೆಗೆ ಹಾವುಗಳು ಸುಲಭವಾಗಿ ಆಕರ್ಷಿತವಾಗುತ್ತವೆ. ಆದ್ದರಿಂದ ಈ ವಸ್ತುಗಳನ್ನು ಇಡುವಾಗ ಜಾಗೃತವಾಗಿರಿ.

ಇದನ್ನೂ Rope way: ಕೇದಾರನಾಥ ರೋಪ್‌ವೇ ಯೋಜನೆಯನ್ನು ಪಡೆದುಕೊಂಡ ಅದಾನಿ ಕಂಪನಿ : ಅಂದಾಜು ವೆಚ್ಚ ಎಷ್ಟು ಕೋಟಿ ಗೊತ್ತಾ?

ಧಾನ್ಯಗಳ ದಾಸ್ತಾನು:

ಸಮಾನ್ಯವಾಗಿ ಮನೆಯಲ್ಲಿ ಅಕ್ಕಿ ಚೀಲಗಳು ಬೇಳೆ, ಇತರ ಧಾನ್ಯ ಇತ್ಯಾದಿ ಸರಿಯಾಗಿ ಮುಚ್ಚದೆ ಇಟ್ಟರೆ ಇಲಿಗಳು ಬರುತ್ತವೆ. ಇನ್ನೇನು ಇಲಿಗಳನ್ನು ಹುಡುಕಿ ಅವುಗಳ ಬೇಟೆಗಾಗಿ ಹಾವುಗಳು ಮನೆಗೆ ಪ್ರವೇಶಿಸುತ್ತವೆ.

Comments are closed.