Rats Repellent: ಜಸ್ಟ್ 1 ರೂಪಾಯಿ ಶಾಂಪೂ ಬಳಸಿ ‘ಇಲಿ’ ಕಾಟದಿಂದ ಮುಕ್ತಿ ಪಡೆಯಿರಿ!

Share the Article

Rats Repellent: ಯಾರ ಮನೆಯಲ್ಲಿ ಇಲಿ ಕಾಟ ಇಲ್ಲ ಹೇಳಿ. ಎಲ್ಲರ ಮನೆಯಲ್ಲೂ ಇಲಿಯನ್ನು ಓಡಿಸೋದು ಹೇಗೆ ಅಂತಾ ಚಿಂತೆ ಮಾಡ್ತಾರೆ. ಇಲಿಗಳ ಉಪದ್ರ ಒಂದಾ ಎರಡ. ಲೈಟ್ ಆಫ್ ಆದ್ರೆ ಸಾಕು. ಸಿಕ್ಕಿ ಸಿಕ್ಕಿದ್ದನ್ನು ಕಚ್ಚಿ ಚಿಂದಿ ಮಾಡುತ್ತೆ. ಅಷ್ಟೇ ಅಲ್ಲ ಹ್ಯಾಂಟವೈರಸ್, ಸಾಲ್ಮೊನೆಲೋಸಿಸ್ ಮತ್ತು ಲೆಪ್ಟೊಸ್ಪೈರೋಸಿಸ್ ನಂತಹ ಮಾರಕ ಕಾಯಿಲೆಗಳನ್ನು ತರಬಲ್ಲವು. ಇವು ಮನುಷ್ಯರಲ್ಲಿ ಜ್ವರ, ಉಸಿರಾಟದ ತೊಂದರೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಒಟ್ಟಿನಲ್ಲಿ ಇಂತಹ ಅಪಾಯಕಾರಿ ಇಲಿ ಓಡಿಸಲು ಹಲವು ಪ್ರಯತ್ನ ಮಾಡಿ ನೀವು ಸೋತು ಹೋಗಿದ್ರೆ ಇದೀಗ ಕೇವಲ ಒಂದು ರೂಪಾಯಿ ಶಾಂಪೂ ಮೂಲಕ ಇಲಿಗಳ ಕಾಟದಿಂದ ಮುಕ್ತಿ (Rats Repellent) ಪಡೆಯಬಹುದು.

ಹೌದು, ಯೂಟ್ಯೂಬರ್ ಒಬ್ರು ತಮ್ಮ ವಿಡಿಯೋ ಮೂಲಕ ಒಂದು ಸೂಪರ್ ಐಡಿಯಾ ನೀಡಿದ್ದಾರೆ. ಬನ್ನಿ ಅದೇನೆಂದು ಇಲ್ಲಿ ವಿವರಿಸಲಾಗಿದೆ.

ಅದಕ್ಕಾಗಿ ನೀವು ಯಾವುದೇ ಖರ್ಚು ಮಾಡಬೇಕಿಲ್ಲ. ಮನೆಯಲ್ಲಿ ಸಿಗುವ ಹಳೆಯ ಬಟ್ಟಲು, ಗೋಧಿ ಹಿಟ್ಟು, ಮೆಣಸಿನ ಪುಡಿ, ಶಾಂಪೂ ಪ್ಯಾಕೆಟ್, ಕರ್ಪೂರ, ಬಟ್ಟೆಯ ತುಂಡು ಮತ್ತು ನೀರು ಇದ್ದರೆ ಸಾಕು.

ಈಗ ನೀವು ಹಳೇ ಬಟ್ಟಲಿನಲ್ಲಿ ಒಂದು ಎರಡು ಚಮಚ ಗೋಧಿ ಹಿಟ್ಟು ಮತ್ತು ಒಂದು ಚಮಚ ತುಂಬಾ ಖಾರ ಮೆಣಸಿನ ಪುಡಿಯನ್ನು ಅಥವಾ ಪೇಸ್ಟ್ ಹಾಕಿ. ಈ ಹಿಟ್ಟು ಮತ್ತು ಮೆಣಸಿನ ಪುಡಿಗೆ ಸ್ವಲ್ಪ ನೀರು (water) ಸೇರಿಸಿ ದೋಸೆ ಹಿಟ್ಟಿನಂತೆ ಮಾಡಿ. ಇದಕ್ಕೆ ಒಂದು ಸಣ್ಣ ಶಾಂಪೂ ಪ್ಯಾಕೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಕರ್ಪೂರವನ್ನು ಪುಡಿಮಾಡಿ ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ:ITR: ಐಟಿಆರ್ ಸಲ್ಲಿಕೆ ಗಡುವು ಇಂದು ಮುಕ್ತಾಯ : ‘ವಿಸ್ತರಣೆ ಇಲ್ಲ’ ಎಂದ ಆದಾಯ ತೆರಿಗೆ ಇಲಾಖೆ

ಈ ಮಿಶ್ರಣವನ್ನು ಮನೆಯಲ್ಲಿರುವ ಹಳೆಯ ಬಟ್ಟೆಯ ತುಂಡಿಗೆ ಬ್ರಷ್ ಬಳಸಿ ಹಚ್ಚಿ. ಬಟ್ಟೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮನೆಯಲ್ಲಿ ಇಲಿಗಳು ಹೆಚ್ಚು ಓಡಾಡುವ ಸ್ಥಳದಲ್ಲಿ ಇಡಬೇಕು. ಇದರ ಕಟು ವಾಸನೆಯಿಂದ ಬೇಗನೆ ಓಡಿಹೋಗುತ್ತವೆ. ಇದರಿಂದ ಇಲಿಗಳು ಸಾಯುವುದಿಲ್ಲ. ಆದರೆ ಅದರ ವಾಸನೆಯನ್ನು ಇಲಿಗಳು ಸಹಿಸೋದಿಲ್ಲ. ಕೆಲವು ದಿನಗಳಿಗೊಮ್ಮೆ, ಈ ಬಟ್ಟೆಯ ತುಂಡುಗಳನ್ನು ಹೊಸದಾಗಿ ಮಾಡಿ ಅದೇ ಸ್ಥಳಗಳಲ್ಲಿ ಇಡಬೇಕು. ಹೀಗೆ ಮಾಡಿದಲ್ಲಿ ಅವು ಮತ್ತೆ ಮನೆಯೊಳಗೆ ಬರುವುದಿಲ್ಲ.

Comments are closed.