UK: ವಿಶ್ವ ಪ್ರವಾಸದಲ್ಲಿದ್ದ ಭಾರತ ಪ್ರವಾಸಿಗನ KTM ಬೈಕ್ ಯುಕೆಯಲ್ಲಿ ಕಳ್ಳತನ – ಹೊಸ ಬೈಕ್ನ್ನು ಗಿಫ್ಟ್ ಮಾಡಿದ ಮ್ಯಾನ್ಸ್ಫೀಲ್ಡ್ ವುಡ್ಹೌಸ್ನ ದಿ ಆಫ್ ರೋಡ್ ಸೆಂಟರ್ !!


UK: ಮುಂಬೈ ಮೂಲದ ಯೋಗೇಶ್ ಅಲೆಕಾರಿ ಒಬ್ಬರೇ ಪ್ರಪಂಚ ಸುತ್ತಲು ಹೊರಟಿದ್ದಾರೆ. ಈ. ಮೂಲಕ 17 ದೇಶಗಳನ್ನು ತಮ್ಮ ಬೈಕ್ನಲ್ಲೇ ಸುತ್ತಿ ಯುಕೆಯಲ್ಲಿ ವಿರಮಿಸುವ ವೇಳೆ ಅವರ ಬೈಕ್ ಕಳ್ಳತನವಾಗಿದೆ. ಈ ಸಂದರ್ಭದಲ್ಲಿ ಡಿಕ್ಕೆ ತೋಚದಂತೆ ಕುಳಿತಿದ್ದ ಅವರಿಗೆ ಮ್ಯಾನ್ಸ್ಫೀಲ್ಡ್ ವುಡ್ಹೌಸ್ನ ದಿ ಆಫ್ ರೋಡ್ ಸೆಂಟರ್ ಒಂದು ಬೈಕ್ನ್ನು ಉಡುಗೊರೆಯಾಗಿ ನೀಡಿ ನಮ್ಮ ಮುಂದಿನ ಪ್ರವಾಸವನ್ನು ಮುಂದುವರಿಸಲು ಅನುಕೂಲ ಮಾಡಿಕೊಟ್ಟಿದೆ.
ಹೌದು, ಹಲವಾರು ವರ್ಷಗಳಿಂದ ದೇಶಗಳನ್ನು ಸುತ್ತಬೇಕೆಂದು ಕನಸನ್ನು ಹೊಂದಿದ ಯೋಗೇಶ್ ಅವರು ಈ ವರ್ಷದ ಮೇ ತಿಂಗಳಿನಲ್ಲಿ ಹಣವನ್ನೆಲ್ಲ ಕೂಡಿಸಿ ಪ್ರವಾಸವನ್ನು ಆರಂಭಿಸಿದ್ದರು. 24,000 ಕಿಲೋಮೀಟರ್ಗಳು ಮತ್ತು 17 ದೇಶಗಳನ್ನು ಕ್ರಮಿಸಿದ ನಂತರ, ಅವರು ಯುಕೆ ತಲುಪಿದರು. ನಂತರ ಯೋಗೇಶ್ ಅವರು ಆಗಸ್ಟ್ 28 ರಂದು ನಾಟಿಂಗ್ಹ್ಯಾಮ್ನ ವೊಲಾಟನ್ ಪಾರ್ಕ್ನಲ್ಲಿ ನಿಲ್ಲಿಸಿದ್ದಾಗ , ಕೆಟಿಎಂ ಬೈಕ್ ಕಳ್ಳತನವಾಗಿತ್ತು, ಅದೇ ಬೈಕ್ನಲ್ಲಿ ಅವರು 17 ದೇಶಗಳನ್ನು ಸುತ್ತಿದ್ದರು.
ಈ ವೇಳೆ ಅವರಿಗೆ ಮುಂದೇನು ಮಾಡಬೇಕೆಂದು ತೋಚದಂತಾಗಿತ್ತು. ಈ ಸಂದರ್ಭದಲ್ಲಿ ಮ್ಯಾನ್ಸ್ಫೀಲ್ಡ್ ವುಡ್ಹೌಸ್ನ ದಿ ಆಫ್ ರೋಡ್ ಸೆಂಟರ್ ಒಂದು ಬೈಕ್ನ್ನು ಉಡುಗೊರೆಯಾಗಿ ಯೋಗೇಶ್ಗೆ ನೀಡಿದ್ದು, ಅವರ ವಿಶ್ವ ಸುತ್ತುವ ಕನಸನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ. ಯೋಗೀಶ್ ಅವರು ಇದೀಗ 10 ದಿನಗಳ ಬಳಿಕ ಈಗ ನಾನು ನಗಬಲ್ಲೆ. ನನಗೆ ಏನು ಹೇಳಲು ಮಾತೇ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ವಸ್ಥಾಪಕ ನಿರ್ದೇಶಕ ಬೆನ್ ಲೆಡ್ವಿಡ್ಜ್ ಮತ್ತು ದಿ ಆಫ್ ರೋಡ್ ಸೆಂಟರ್ನ ಮಾಲೀಕ ಡೇನಿಯಲ್ ವ್ಯಾಟ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ನೋಡಿ ಅಲೆಕಾರಿಗೆ ಸಹಾಯ ಮಾಡಲು ನಿರ್ಧಾರಿಸಿದ್ದಾರೆ. ಅಲ್ಲದೆ ನಮ್ಮ ಬಳಿ ಈ ಬೈಕ್ ಇದೆ, ನಾವು ಅವರಿಗೆ ಸಹಾಯ ಮಾಡಬೇಕು ಎಂದುಕೊಂಡೆವು ಎಂದು ಮಾಲೀಕರು ತಿಳಿಸಿದ್ದಾರೆ.
Comments are closed.