Promotion: ಶಾಲಾ ಶಿಕ್ಷಕರಿಗೆ ಬಡ್ತಿ – ತುರ್ತಾಗಿ ಈ ದಾಖಲೆ ಸಲ್ಲಿಸಿ!!

Share the Article

Promotion : ರಾಜ್ಯದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢ ಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢ ಶಾಲಾ ಶಿಕ್ಷಕರು ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದುವ ಕುರಿತು ಸರ್ಕಾರ ಈಗಾಗಲೇ ಗುಡ್ ನ್ಯೂಸ್ ಕೊಟ್ಟಿದೆ. ಹೀಗಾಗಿ ತುರ್ತಾಗಿ ಈ ದಾಖಲೆಯನ್ನು ಶಿಕ್ಷಕರು ಸಲ್ಲಿಸಬೇಕೆಂದು ಕೇಳಲಾಗಿದೆ.

ಹೌದು, ಬಡ್ತಿ ಹೊಂದುವ ಪ್ರಯುಕ್ತ ಆಗುವ ವೇತನ ವ್ಯತ್ಯಾಸದ ಕುರಿತು ಪರಿಶೀಲಿಸುವ ಸಂಬಂಧ ಮಾಹಿತಿ ಸಲ್ಲಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ವಿಶೇಷ ಸದನ ಸಮಿತಿಯು ದಿನಾಂಕ:16.09.2025ರಂದು ನಡೆಯುವ ಸಭೆಗೆ ಮಾಹಿತಿ ಸಲ್ಲಿಸಲು ಸೂಚಿಸಿದ್ದು. ಈ ಸಂಬಂಧ ತಮ್ಮ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಪತ್ರಕ್ಕೆ ಅನುಬಂಧಿಸಿರುವ ನಿಗಧಿತ ನಮೂನೆ-1.2 ಮತ್ತು 03ರಲ್ಲಿ ನಮೂದಿಸಿ ದಿನಾಂಕ:15.09.2025ರ ಒಳಗಾಗಿ ಈ ಕಛೇರಿಯ ಅನುದಾನಿತ giaest2@gmail.com, ಸರ್ಕಾರಿ est4cpibng@gmail.com ಇ-ಮೇಲ್ಗೆ ಮಾಹಿತಿ ಸಲ್ಲಿಸಲು ಸೂಚಿಸಿದೆ. (ನಮೂನೆಗಳನ್ನು MS EXCEL ನ Nirmala-US Font ನಲ್ಲಿ ಮಾಹಿತಿ ಸಿದ್ಧಪಡಿಸಿ ಸಲ್ಲಿಸುವುದು)

ಅಲ್ಲದೆ ಮಾನ್ಯ ಅಪರ ಆಯುಕ್ತರು, ಧಾರವಾಡ, ಕಲಬುರ್ಗಿ ಆಯುಕ್ತಾಲಯ ರವರಿಗೆ ಕಳುಹಿಸುತ್ತಾ ತಮ್ಮ ಆಯುಕ್ತಾಲಯಕ್ಕೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳಿಂದ ಮಾಹಿತಿಯನ್ನು ನಿಗಧಿತ ನಮೂನೆಗಳಲ್ಲಿ ಪಡೆದು ಕ್ರೋಢೀಕರಿಸಿ, ಕ್ರೋಢೀಕೃತ ಮಾಹಿತಿಯನ್ನು ಈ ಕಛೇರಿಗೆ ಒಂದು ಮುದ್ರಿತ ಪ್ರತಿ ಮತ್ತು ಸಾಫ್ಟ್ ಪ್ರತಿಯನ್ನು ಇ-ಮೇಲ್ ವಿಳಾಸಕ್ಕೆ ಕಳುಹಿಸಲು ಕೋರಿದೆ.

ಇದನ್ನು ಓದಿ:TATA ಕಾರಿನ ಹಿಂಬದಿಯ ಗ್ಲಾಸಿನಲ್ಲಿ ‘ವೋಕಲ್ ಫಾರ್ ಲೋಕಲ್’ ಸ್ಲೋಗನ್, ಅದರ ಅರ್ಥವೇನು?  

Comments are closed.