Home News RBI: EMI ಕಟ್ಟದಿದ್ದರೆ ಲಾಕ್ ಆಗುತ್ತೆ ನಿಮ್ಮ ಮೊಬೈಲ್ – RBI ಹೊಸ ರೂಲ್ಸ್

RBI: EMI ಕಟ್ಟದಿದ್ದರೆ ಲಾಕ್ ಆಗುತ್ತೆ ನಿಮ್ಮ ಮೊಬೈಲ್ – RBI ಹೊಸ ರೂಲ್ಸ್

Hindu neighbor gifts plot of land

Hindu neighbour gifts land to Muslim journalist

RBI: ಸಾಲದ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು, EMI ಕಟ್ಟದವರ ಮೊಬೈಲನ್ನು ಲಾಕ್ ಮಾಡಲು ನಿರ್ಧರಿಸಿದೆ.

ಹೌದು, ಮಾಸಿಕ ಕಂತಿನಲ್ಲಿ (ಇಎಂಐ) ಪಾವತಿಸುತ್ತೇನೆ ಎಂದು ಭರವಸೆ ನೀಡಿ ಮೊಬೈಲ್‌ ಖರೀದಿಸಿದ್ದೀರಾ? ಆ ಸಾಲವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಿದ್ದರೆ, ನಿಮ್ಮ ಮೊಬೈಲ್‌ ಫೋನ್‌ ಲಾಕ್‌ ಆಗಬಹುದು! ಭಾರತದಲ್ಲಿ ಹಲವು ಮಂದಿ ಕಂತಿನಲ್ಲಿ ತೀರಿಸುವುದಾಗಿ ಮೊಬೈಲ್‌ ಖರೀದಿಸುತ್ತಾರೆ. ಆದರೆ ಸಕಾಲಕ್ಕೆ ಪಾವತಿಸುವುದೇ ಇಲ್ಲ. ಅಂತಹ ಪದ್ಧತಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮುಂದಾಗಿದೆ.

ಅಂದಹಾಗೆ ಇಎಂಐನಲ್ಲಿ ಮೊಬೈಲ್‌ ಖರೀದಿಸಿ, ಕಂತು ಕಟ್ಟದವರ ಮೊಬೈಲ್‌ ಫೋನ್‌ಗಳನ್ನು ಸಾಲದಾತ ಕಂಪನಿಗಳು ಈ ಹಿಂದೆ ಲಾಕ್‌ ಮಾಡುತ್ತಿದ್ದವು. ಮೊಬೈಲ್‌ ಸಾಲ ನೀಡುವಾಗಲೇ ಗ್ರಾಹಕನ ಮೊಬೈಲ್‌ನಲ್ಲಿ ಆಯಪ್‌ವೊಂದನ್ನು ಇನ್‌ಸ್ಟಾಲ್‌ ಮಾಡಿ ಸಾಲ ಕಟ್ಟದೆ ಇದ್ದಾಗ ಅದರ ಮೂಲಕ ಫೋನ್‌ ಲಾಕ್‌ ಮಾಡುತ್ತಿದ್ದವು. ಆದರೆ ಇದಕ್ಕೆ ಆರ್‌ಬಿಐ ಕಳೆದ ವರ್ಷ ತಡೆಯೊಡ್ಡಿತ್ತು. ಇದೀಗ ಸಾಲಗಾರ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ತನ್ನ ನ್ಯಾಯಯುತ ಅಭ್ಯಾಸ ಸಂಹಿತೆಗಳನ್ನು ಕೆಲ ತಿಂಗಳಲ್ಲೇ ಮಾರ್ಪಡಿಸಲು ಆರ್‌ಬಿಐ ಮುಂದಾಗಿದೆ ಫೋನ್‌ ಲಾಕಿಂಗ್ ವ್ಯವಸ್ಥೆ ಕುರಿತು ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ:Technology: ಪಾಸ್‌ವರ್ಡ್ ಇಲ್ಲದೆ ಇನ್​ಸ್ಟಾಗ್ರಾಮ್‌ಗೆ ಲಾಗಿನ್ ಆಗುವುದು ಹೇಗೆ?

ಇನ್ನು ಆರ್ಬಿಐ ಎರಡು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಮೊದಲನೆಯದಾಗಿ, ಸಾಲದಾತರು ಫೋನ್ ಅನ್ನು ಲಾಕ್ ಮಾಡುವ ಮೂಲಕ ಸಾಲದ ಮೊತ್ತವನ್ನು ಮರುಪಡೆಯಬಹುದು. ಎರಡನೆಯದಾಗಿ, ಗ್ರಾಹಕರ ಡೇಟಾ ಕೂಡ ಸುರಕ್ಷಿತವಾಗಿದೆ.