Technology: ಪಾಸ್ವರ್ಡ್ ಇಲ್ಲದೆ ಇನ್ಸ್ಟಾಗ್ರಾಮ್ಗೆ ಲಾಗಿನ್ ಆಗುವುದು ಹೇಗೆ?

Technology: ಬಹುತೇಕ ಜನರು ಇನ್ಸ್ಟಾಗ್ರಾಮ್ ಬಳಕೆ ಮಾಡುತ್ತಿರುವುದು ಗೊತ್ತೇ ಇದೆ. ಆದ್ರೆ ಪ್ರತೀ ಬಾರಿ ಪದೇ ಪದೇ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗುವ ಕಿರಿ ಕಿರಿ ತಪ್ಪಿಸಲು ಇನ್ಸ್ಟಾಗ್ರಾಮ್ ಒಂದು ಆಯ್ಕೆಯನ್ನು ನೀಡಿದೆ. ಈ ‘ಸೇವ್ಡ್ ಲಾಗಿನ್’ ಫೀಚರ್ ಮೂಲಕ, ನೀವು ಪಾಸ್ವರ್ಡ್ ಇಲ್ಲದೆಯೇ ಸುಲಭವಾಗಿ ನಿಮ್ಮ ಖಾತೆಗೆ ಲಾಗಿನ್ ಆಗಬಹುದು.

ಪಾಸ್ವರ್ಡ್ ಇಲ್ಲದೆ ಇನ್ಸ್ಟಾಗ್ರಾಮ್ಗೆ ಲಾಗಿನ್ ಆಗುವ ಕ್ರಮಗಳು ಇಲ್ಲಿವೆ:
ಮೊದಲು ನಿಮ್ಮ ಫೋನ್ನಲ್ಲಿ ಇನ್ಸ್ಟಾಗ್ರಾಮ್ ಆ್ಯಪ್ ತೆರೆಯಿರಿ.
ಕೆಳಗಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ, ಬಲಭಾಗದ ಮೇಲ್ಭಾಗದಲ್ಲಿ ಕಾಣಿಸುವ ಹ್ಯಾಂಬರ್ಗರ್ ಐಕಾನ್ (ಮೂರು ಅಡ್ಡಗೆರೆಗಳು) ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ:Center Gvt: 10ನೇ ತರಗತಿ ಪಾಸಾದವರಿಗೆ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ – ಸಂಬಳ 60 ಸಾವಿರ
ಮೆನುವಿನಲ್ಲಿರುವ ಅಕೌಂಟ್ ಸೆಂಟರ್ ಆಯ್ಕೆಗೆ ಹೋಗಿ. ಅಲ್ಲಿ ಪಾಸ್ವರ್ಡ್ ಮತ್ತು ಭದ್ರತೆ (Pasword and security) ವಿಭಾಗವನ್ನು ಆಯ್ಕೆಮಾಡಿ. ಅಲ್ಲಿ ಲಾಗಿನ್ ಮತ್ತು ರಿಕವರಿ ಸೆಕ್ಷನ್ನಲ್ಲಿರುವ ಸೇವ್ಡ್ ಲಾಗಿನ್ ಇನ್ಫಾರ್ಮೇಶನ್ (Saved Login information) ಮೇಲೆ ಟ್ಯಾಪ್ ಮಾಡಿ. ಅಲ್ಲಿ ನೀವು ಲಾಗಿನ್ ಆಗಿರುವ ಖಾತೆಗಳ ಪಟ್ಟಿಯನ್ನು ಇಲ್ಲಿ ನೋಡುತ್ತೀರಿ. ಯಾವ ಖಾತೆಯ ಪಾಸ್ವರ್ಡ್ ಉಳಿಸಲು ಬಯಸುತ್ತೀರೋ, ಅದನ್ನು ಆಯ್ಕೆಮಾಡಿ. ಮುಂದೆ ಕಾಣಿಸುವ ಸೇವ್ಡ್ ಲಾಗಿನ್ ಇನ್ಫಾರ್ಮೇಶನ್ ಆಯ್ಕೆಯ ಪಕ್ಕದಲ್ಲಿರುವ ಟಾಗಲ್ ಅನ್ನು ಆನ್ ಮಾಡಿ. ಈ ಹಂತಗಳನ್ನು ಅನುಸರಿಸಿದ ನಂತರ, ನಿಮ್ಮ ಇನ್ಸ್ಟಾಗ್ರಾಮ್ ಖಾತೆಯು ನಿಮ್ಮ ಲಾಗಿನ್ ವಿವರಗಳನ್ನು ನೆನಪಿಟ್ಟುಕೊಳ್ಳುತ್ತದೆ. ಇದರಿಂದಾಗಿ ನೀವು ಪದೇ ಪದೇ ಪಾಸ್ವರ್ಡ್ ಹಾಕುವ ಕಿರಿ ಕಿರಿ ತಪ್ಪುತ್ತದೆ.
Comments are closed.