Holidays : ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ: ಯಾವಾಗಿಂದ ರಜೆ ಆರಂಭ? ಎಷ್ಟು ದಿನ?

Share the Article

Holiday : ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ.20 ರಿಂದ ದಸರಾ ರಜೆ ಪ್ರಾರಂಭಗೊಳ್ಳಲಿದೆ. ಹಾಗೂ ಈ ರಜೆ ಅಕ್ಟೋಬರ್‌ 6ರ ವರೆಗೂ ಇರಲಿದೆ.

ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ.20 ರಿಂದ ಮಧ್ಯಾವಧಿ (ದಸರಾ ರಜೆ) ಪ್ರಾರಂಭಗೊಳ್ಳಲಿದೆ. ಅ.7 ರಿಂದ ಶಾಲೆಗಳು ಪ್ರಾರಂಭಗೊಳ್ಳಲಿದೆ. ಅವಿಭಜಿತ ದ.ಕ.ಜಿಲ್ಲೆಯ ಸಿಬಿಎಸ್‌ಯ ಶಾಲೆಗಳಲ್ಲಿ ಸೆ.20 ರಿಂದ ಮಧ್ಯಾವಧಿ ರಜೆ ಆರಂಭಗೊಂಡು ಅ.2 ರವರೆಗೆ ಇರಲಿದ್ದು, ಅ.3 ರಿಂದ ತರಗತಿಗಳು ಪುನಃ ಆರಂಭಗೊಳ್ಳಲಿದೆ.

ಇದನ್ನೂ ಓದಿ:MLA Sangamesh: ಹಬ್ಬ ನೋಡಿ ಖುಷಿಯಿಂದ ಹೇಳಿದೆ, ನನ್ನ ಮಾತನ್ನು ತಿರುಚಲಾಗಿದೆ-ಕಾಂಗ್ರೆಸ್‌ ಶಾಸಕ ಸಂಗಮೇಶ್‌

ಸಿಬಿಎಸ್‌ಇ ಕೆಲವು ಆಡಳಿತ ಮಂಡಳಿಗಳ ರಜಾ ಅವಧಿಯಲ್ಲಿ ವ್ಯತ್ಯಾಸ ಇರಬಹುದು ಎಂದು ವರದಿಯಾಗಿದೆ.

ದೀಪಾವಳಿ ಹಾಗೂ ಕ್ರಿಸ್ಮಸ್‌ ಸಂದರ್ಭದಲ್ಲಿ ರಜಾ ಕೊಡುವಾಗ ಕಡಿಮೆ ಮಾಡುವ ಸಾಧ್ಯತೆ ಕೂಡಾ ಇದೆ. ವಿದ್ಯಾರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ಯಾವುದೇ ಒತ್ತಡ ಆಗದ ರೀತಿಯಲ್ಲಿ ರಜಾವಧಿಯ ವಿಶೇಷ ತರಗತಿಗೆ ಯೋಜನೆ ಮಾಇಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ರೋಗಿ ಜೊತೆ ಸೆಕ್ಸ್ ನಡೆಸಿದ ವೈದ್ಯೆ, ಮೆಡಿಕಲ್ ಲೈಸೆನ್ಸ್ ಕ್ಯಾನ್ಸಲ್

 

Comments are closed.