Kerala RSS: ಎಸ್‌ಡಿಪಿಐ ಸದಸ್ಯನ ಹತ್ಯೆಯ ವಾರ್ಷಿಕೋತ್ಸವ ಆಚರಣೆ; ಕೇರಳದ ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Kerala RSS: ಕೇರಳದ ಕಣ್ಣೂರು ಜಿಲ್ಲೆಯ ಪೊಲೀಸರು ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದಕ್ಕಾಗಿ ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಣ್ಣವಂನಲ್ಲಿ ಈ ಘಟನೆ ನಡೆದಿದ್ದು, ಆರ್‌ಎಸ್‌ಎಸ್ ಕಾರ್ಯಕರ್ತರು ಕೇಕ್ ಕತ್ತರಿಸಿ ಆಚರಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

2020 ರಲ್ಲಿ ಕಣ್ಣೂರಿನ ಕಣ್ಣವಂನಲ್ಲಿ ಎಸ್‌ಡಿಪಿಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗ) ಸದಸ್ಯ ಸಲಾವುದ್ದೀನ್ ಅವರನ್ನು ಆರ್‌ಎಸ್‌ಎಸ್‌ಗೆ ಸೇರಿದವರು ಎಂದು ಹೇಳಲಾದ ಗುಂಪೊಂದು ಕೊಚ್ಚಿ ಕೊಂದಿತ್ತು.
ಕೇಕ್ ಮೇಲೆ “ಅಭಿಮಾನಂ ಕಣ್ಣವಂ ಸ್ವಯಂಸೇವಕರು” (ಹೆಮ್ಮೆ ಕಣ್ಣವಂ ಸ್ವಯಂಸೇವಕರು) ಎಂದು ಬರೆದಿದ್ದರೆ, “ಸಾವಿರಾರು ನಷ್ಟಗಳ ನಡುವೆಯೂ, ಕಣ್ಣೂರಿನಲ್ಲಿರುವ ದೃಢ ಹೃದಯದ ಸ್ವಯಂಸೇವಕರು ಹೃದಯದಿಂದ ಸಂತೋಷಪಟ್ಟ ದಿನವಾಗಿತ್ತು. ಕಣ್ಣವಂನಲ್ಲಿ ಎಸ್‌ಡಿಪಿಐ ಕಾರ್ಯಕರ್ತನನ್ನು ಕೊಲ್ಲಲ್ಪಟ್ಟ ದಿನ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 8 ರಂದು ಆಚರಣೆ ನಡೆದಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 192 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಣ್ಣವಂ ಪೊಲೀಸರು ತಿಳಿಸಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, “ಶಾಂತಿಯುತ ವಾತಾವರಣದಲ್ಲಿ ರಾಜಕೀಯ ಘರ್ಷಣೆಯನ್ನು ಸೃಷ್ಟಿಸುವ ಉದ್ದೇಶದಿಂದ ಸಮಾಜ ವಿರೋಧಿ ಅಂಶಗಳು ಕೇಕ್ ಕತ್ತರಿಸಿ ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆಯನ್ನು ಆಚರಿಸಿವೆ.” ಎಂದು ಹೇಳಿದೆ.
ಇದನ್ನೂ ಓದಿ:Nepal: ಪ್ರತಿಭಟನಾಕಾರರ ಕಿಚ್ಚಿಗೆ ನೇಪಾಳದ ಅತಿ ಎತ್ತರದ ಹೋಟೆಲ್ ಭಸ್ಮ
2018 ರಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ಶ್ಯಾಮ್ ಪ್ರಸಾದ್ ಹತ್ಯೆಯ ಆರೋಪಿಗಳಲ್ಲಿ ಸಲಾಹುದ್ದೀನ್ ಒಬ್ಬನೆಂದು ವರದಿಯಾಗಿದೆ. ಶ್ಯಾಮ್ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಕಣ್ಣೂರಿನಲ್ಲಿ ಮಚ್ಚಿನಿಂದ ಕೂಡಿದ ಗುಂಪೊಂದು ಶ್ಯಾಮ್ ಅವರನ್ನು ಕೊಚ್ಚಿ ಕೊಲ್ಲಲಾಗಿತ್ತು. ನಂತರ ಎಬಿವಿಪಿ ಈ ಕೊಲೆಗೆ ಪಿಎಫ್‌ಐ ಕಾರಣ ಎಂದು ಆರೋಪಿಸಿತ್ತು.
Comments are closed.