IPhone: ಆಪಲ್‌ ನಿಂದ ಭರ್ಜರಿ ಫ್ಯೂಚರ್ಸ್ ಇರೋ ಐಫೋನ್‌ 17, 17 ಪ್ರೋ, 17 ಮ್ಯಾಕ್ಸ್‌, ಐಫೋನ್‌ ಏರ್‌ ಮೊಬೈಲ್ ಗಳ ಬಿಡುಗಡೆ – ಭಾರತದಲ್ಲಿ ಬೆಲೆ ಎಷ್ಟು?

Share the Article

IPhone : ಆಪಲ್ ಕಂಪೆನಿಯು. ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ ಏರ್ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ.

ಅಂದಾಹಾಗೆ ಐಫೋನ್‌ 17ಗೆ ಭಾರತದಲ್ಲಿ 82,900 ರೂ., ಐಫೋನ್‌ ಏರ್‌ಗೆ 1,19,900 ರೂ., 17 ಪ್ರೋಗೆ 1,34,900 ರೂ. , 17 ಪ್ರೋ ಮ್ಯಾಕ್ಸ್‌ 1,49,900 ರೂ. ದರವನ್ನು ನಿಗದಿ ಮಾಡಲಾಗಿದೆ.

ಐಫೋನ್ ಏರ್ ಮಾದರಿಯು ಹೊಸ ಎಂಟ್ರಿಯಾಗಿದ್ದು, ಹಿಂದಿನ ಪ್ಲಸ್ ಮಾದರಿಗಳಿಗೆ ಪರ್ಯಾಯವಾಗಿದೆ. ಇದು ಅತ್ಯಂತ ತೆಳು ಮತ್ತು ಹಗುರವಾದ ಮಾದರಿಯಾಗಿದೆ. ಐಫೋನ್ 17 ಸರಣಿಗಳಲ್ಲಿ ಅತ್ಯಂತ ಪ್ರಮುಖ ತಂತ್ರಜ್ಞಾನದ ಅಪ್‌ಗ್ರೇಡ್‌ಗಳನ್ನು ಕಾಣಬಹುದಾಗಿದೆ. ಪ್ರೊ ಮಾದರಿಗಳು ಇನ್ನಷ್ಟು ವರ್ಧಿತ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಹೊಸ ಐಫೋನ್‌ಗಳ ಪೂರ್ವ-ಆರ್ಡರ್‌ಗಳು ಸೆಪ್ಟೆಂಬರ್ 12ರಂದು ಪ್ರಾರಂಭವಾಗಲಿದ್ದು, ಲಭ್ಯತೆಯು ಸೆಪ್ಟೆಂಬರ್ 19 ಗ್ರಾಹಕರ ಕೈಸೇರಲಿವೆ. ಇನ್ನು ಇವುಗಳ ವೈಶಿಷ್ಟ್ಯತೆ ಏನು ಎಂದು ನೋಡೋಣ

ಐಫೋನ್‌ 17

ಡಿಸ್ಪ್ಲೇ- 6.3 ಇಂಚಿನ LTPO Super Retina XDR OLED ಸ್ಕ್ರೀನ್‌, 1206 x 2622 ಪಿಕ್ಸೆಲ್‌, ~460 ಪಿಪಿಐ

ಪ್ಲಾಟ್‌ಫಾರಂ- ಐಓಎಸ್‌ 26, ಆಪಲ್‌ ಎ19 ಚಿಪ್‌, ಹೆಕ್ಸಾಕೋರ್‌ ಪ್ರೊಸೆಸರ್‌ ಆಪಲ್‌ ಜಿಪಿಯು(5 ಕೋರ್‌ ಗ್ರಾಫಿಕ್ಸ್‌)

ಮೆಮೋರಿ- ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌, 512 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌.

ಕ್ಯಾಮೆರಾ:- ಡ್ಯುಯಲ್‌ ಕ್ಯಾಮೆರಾ 48 MP, f/1.6, 26mm (wide), 1/1.56″, 1.0µm, dual pixel PDAF, sensor-shift OIS 48 MP, f/2.2, 13mm, 120˚ (ultrawide), 1/2.55″, 0.7µm, PDAF

ಬ್ಯಾಟರಿ – ಲಿಯಾನ್‌ 3692 mAh ಬ್ಯಾಟರಿ.

ಐಫೋನ್‌ 17

ಪ್ರೋ ಡಿಸ್ಪ್ಲೇ- 6.3 ಇಂಚಿನ LTPO Super Retina XDR OLED ಸ್ಕ್ರೀನ್‌, 1206 x 2622 ಪಿಕ್ಸೆಲ್‌, ~460 ಪಿಪಿಐ

ಪ್ಲಾಟ್‌ಫಾರಂ -ಐಓಎಸ್‌ 26, ಆಪಲ್‌ ಎ19 ಚಿಪ್‌, ಹೆಕ್ಸಾಕೋರ್‌ ಪ್ರೊಸೆಸರ್‌ ಆಪಲ್‌ ಜಿಪಿಯು(6 ಕೋರ್‌ ಗ್ರಾಫಿಕ್ಸ್‌)

ಮೆಮೋರಿ- ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌, 512 ಜಿಬಿ/ 12 ಜಿಬಿ ರ‍್ಯಾಮ್‌, 1 ಟಿಬಿ ಆಂತರಿಕ ಮೆಮೊರಿ/ 12 ಜಿಬಿ ರ‍್ಯಾಮ್‌

ಕ್ಯಾಮೆರಾ:-ಟ್ರಿಪಲ್‌ ಕ್ಯಾಮೆರಾ 48 MP, f/1.6, 24mm (wide), 1/1.28″, 1.22µm, dual pixel PDAF, sensor-shift OIS 48 MP, f/2.8, 100mm (periscope telephoto), 1/2.55″, 0.7µm, PDAF, 3D sensor‑shift OIS, 4x optical zoom 48 MP, f/2.2, 13mm, 120˚ (ultrawide), 1/2.55″, 0.7µm, PDAF TOF 3D LiDAR scanner (depth)

ಸಿಂಗಲ್‌ 18 ಎಂಪಿ multi-aspect, f/1.9, (wide), PDAF, OIS, SL 3D, (depth/biometrics sensor)

ಬ್ಯಾಟರಿ-ಲಿಯಾನ್‌ 3988 mAh (ನ್ಯಾನೋ ಸಿಮ್‌ ಮಾಡೆಲ್‌), ಲಿಯಾನ್‌ 4252 mAh(ಇ ಸಿಮ್‌)

ಐಫೋನ್‌ ಏರ್‌

ಡಿಸ್ಪ್ಲೇ - 6.5 ಇಂಚಿನ LTPO Super Retina XDR OLED ಸ್ಕ್ರೀನ್‌, 1260 x 2736 ಪಿಕ್ಸೆಲ್‌, ~460 ಪಿಪಿಐ

ಪ್ಲಾಟ್‌ಫಾರಂ- ಐಓಎಸ್‌ 26, ಆಪಲ್‌ ಎ19 ಚಿಪ್‌, ಹೆಕ್ಸಾಕೋರ್‌ ಪ್ರೊಸೆಸರ್‌ ಆಪಲ್‌ ಜಿಪಿಯು(5 ಕೋರ್‌ ಗ್ರಾಫಿಕ್ಸ್‌)

ಮೆಮೋರಿ:-ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌, 512 ಜಿಬಿ/ 12 ಜಿಬಿ ರ‍್ಯಾಮ್‌, 1 ಟಿಬಿ ಆಂತರಿಕ ಮೆಮೊರಿ/ 12 ಜಿಬಿ ರ‍್ಯಾಮ್‌

ಕ್ಯಾಮೆರಾ:-ಸಿಂಗಲ್‌ ಕ್ಯಾಮೆರಾ 48 MP, f/1.6, 26mm (wide), 1/1.56″, 1.0µm, dual pixel PDAF, sensor-shift OIS

ಸಿಂಗಲ್‌ 18 ಎಂಪಿ multi-aspect, f/1.9, (wide), PDAF, OIS, SL 3D, (depth/biometrics sensor)

ಬ್ಯಾಟರಿ- ಲಿಯಾನ್‌ 3149 ಮಹೇಶ್

ಇನ್ನು ಇವುಗಳಲ್ಲಿ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಚಲನಚಿತ್ರ ನಿರ್ಮಾಪಕರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ನಿರ್ಮಿಸಲಾದ ಇಂಡಸ್ಟ್ರೀ ಫಸ್ಟ್ ವಿಡಿಯೊ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಪ್ರೊರೆಸ್ ರಾ, ಆ್ಯಪಲ್ ಲಾಗ್ 2 ಮತ್ತು ಜೆನ್‌ಲಾಕ್ ಸೇರಿವೆ. ಎರಡೂ ಮಾದರಿಯ ಐಫೋನ್‌ಗಳು ಹಿಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಮತ್ತು ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಅನ್ನು ಸಹ ಹೊಂದಿವೆ.

ಇದನ್ನೂ ಓದಿ:Gadaga: ಗದಗದಲ್ಲಿ ಕಾರಿನ ಮೇಲೆ ಪಾಕಿಸ್ತಾನದ ಧ್ವಜ ಹಾಕಿ ಪೋಸ್ಟ್‌: ದೂರು ದಾಖಲು

Comments are closed.