Rose Plant Care: ಗುಲಾಬಿ ಗಿಡದಲ್ಲಿ ದಟ್ಟವಾಗಿ ಹೂವು ಅರಳಲು ಈ ರೀತಿ ಮಾಡಿ!

Share the Article

Rose Plant Care: ಗುಲಾಬಿ ಹೂ ಪ್ರಿಯರು ಗಿಡಗಳನ್ನು ತಂದು ಮನೆಯ ಅಂಗಳದಲ್ಲಿಯೋ ಅಥವಾ ಹೂಕುಂಡಗಳಲ್ಲಿಯೋ ನೆಡುತ್ತಾರೆ. ಬೇಕಾದಷ್ಟು ನೀರು ಗೊಬ್ಬರಗಳನ್ನು ಗಿಡಕ್ಕೆ ಹಾಕುತ್ತಾರೆ. ಆದರೆ ಹೂವುಗಳು ಬಿಡುವುದೇ ಇಲ್ಲ. ಹೀಗಿದ್ದಾಗ ಗಿಡ ನೆಟ್ಟವರಿಗೆ ಚಿಂತೆಯಾಗುವುದು ಸಹಜ. ಆದರೆ ಮನೆಯಲ್ಲಿಯೇ ತಯಾರಿಸಬಹುದಾದ ಈ ಸರಳ ಪರಿಹಾರವು ಗುಲಾಬಿ ಗಿಡದಲ್ಲಿ ಹೂವುಗಳು ಅರಳಲು ಬಹಳವೇ ಸಹಾಯ ಮಾಡುತ್ತದೆ.

ಬೇಕಾದ ಸಾಮಾಗ್ರಿಗಳು
ಒಂದು ಮುಷ್ಟಿ ತುಂಡರಿಸಿದ ಶುಂಠಿ, ಒಂದು ಚಮಚ ಸಕ್ಕರೆ, ಅರ್ಧ ಚಮಚ ಬಿಳಿ ವಿನೇಗ‌ರ್, ಅರ್ಧ ಲೀಟರ್ ನೀರು

ಇದನ್ನೂ ಓದಿ:Pakistan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿಯ ಮೇಲೆ ಜೈಲಿನ ಹೊರಗೆ ಮೊಟ್ಟೆ ಎಸೆತ: ವಿಡಿಯೋ ವೈರಲ್

ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ತುಂಡರಿಸಿದ ಶುಂಠಿ, ಸಕ್ಕರೆ, ಬಿಳಿ ವಿನೇಗ‌ರ್ ಮತ್ತು ಅರ್ಧ ಲೀಟರ್ ನೀರು ಹಾಕು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ನೀರು ಗಿಡದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಜೊತೆಗೆ ದಟ್ಟವಾಗಿ ಹೂವುಗಳು ಅರಳಲು ಕೂಡ ಸಹಾಯಕ ವಾಗಿದೆ.

ಈ ನೀರನ್ನು ಗಿಡದ ಬುಡಕ್ಕೆ ಹಾಕುವುದು, ಅಥವಾ ಈ ನೀರನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಗಿಡದಲ್ಲಿ ದಟ್ಟವಾಗಿ ಹೂವು ಅರಳುತ್ತದೆ.

Comments are closed.