Puttur: ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲೆಗೆ ಪುತ್ತೂರು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ “ಅತ್ಯುತ್ತಮ ಎಸ್ ಡಿ ಎಂ ಸಿ” ಪ್ರಶಸ್ತಿ ಪ್ರದಾನ

Puttur: ಪುತ್ತೂರು (Puttur) ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆದ ಪುತ್ತೂರು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅತ್ಯುತ್ತಮ ಎಸ್ ಡಿ ಎಂ ಸಿ ಎಂದು ವೀರಮಂಗಲ ಪಿಎಂಶ್ರೀ ಶಾಲೆಗೆ ಗೌರವ ಪ್ರಶಸ್ತಿಯನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಪ್ರದಾನ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ನವೀನ್ ಭಂಡಾರಿ,ಅಕ್ಷರ ದಾಸೋಹ ಸಹ ನಿರ್ದೇಶಕ ವಿಷ್ಣುಪ್ರಸಾದ್ ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್ ಸೇರಿದಂತೆ ಹಲವಾರು ಗಣ್ಯರು ,ವಿವಿಧ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು ಪ್ರಶಸ್ತಿಯನ್ನು ಎಸ್ ಡಿ ಎಂ ಸಿಯ ದಿನೇಶ್ ಶೆಟ್ಟಿ , ವಿನುತಾ ಗಣೇಶ್,ಚಿತ್ರಾ ಗೋಪಾಲ್ ಸ್ವೀಕರಿಸಿದರು. ಶಿಕ್ಷಕರಾದ ಹರಿಣಾಕ್ಷಿ, ಶೋಭಾ,ಶಿಲ್ಪರಾಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು.
Comments are closed.