Gas Cylinder: ಗ್ಯಾಸ್ ಸಿಲಿಂಡರ್ ಲೀಕೇಜ್ ಆಗಿದೆಯಾ ಎಂದು ಈ ರೀತಿ ಚೆಕ್ ಮಾಡಿ

Gas Cylinder: ಇತ್ತೀಚಿಗೆ ಅಡುಗೆ ಮಾಡಲು ಶೇಕಡಾ 90 ರಷ್ಟು ಜನ ಗ್ಯಾಸ್ ನ್ನೇ ಬಳಸುತ್ತಾರೆ. ಆದರೆ ಇಷ್ಟೊಂದು ಉಪಯೋಗವಾಗುವ ಗ್ಯಾಸ್ ಸಿಲಿಂಡರ್ ಬಳಕೆಯ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು! ಯಾಕೆಂದ್ರೆ ಈ ಗ್ಯಾಸ್ ಸಿಲಿಂಡರ್ (Gas Cylinder) ಬಳಕೆಯ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಮುಂದೆ ಪ್ರಾಣಕ್ಕೆ ಕಂಠಕವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅದಕ್ಕಾಗಿ ನೀವು ಎಲ್‌ಪಿಜಿ ಸಿಲಿಂಡರ್ ಬಳಸುವಾಗ, ನೀವು ಬಳಸುತ್ತಿರುವ ಗ್ಯಾಸ್ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆ ಸಮಸ್ಯೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಕೆಲವು ಮಾಹಿತಿ ಇಲ್ಲಿದೆ.
ನೀವು ಹಳೆಯ ಸಿಲಿಂಡರ್ ತೆಗೆದು ಹೊಸದನ್ನು ಫಿಕ್ಸ್ ಮಾಡುವ ಸಂದರ್ಭದಲ್ಲಿ, ಮೊದಲು ಅನಿಲ ಸೋರಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
ಇದಕ್ಕಾಗಿ, ಗ್ಯಾಸ್ ಸಿಲಿಂಡರ್‌ನ ಮುಚ್ಚಳವನ್ನು ತೆಗೆದ ನಂತರ, ಗ್ಯಾಸ್ ರೆಗ್ಯುಲೇಟರ್ ಅಳವಡಿಸಲಾದ ಪ್ರದೇಶದಲ್ಲಿ ಕೆಲವು ಹನಿ ನೀರನ್ನು ಹಾಕಿ. ಆ ಹನಿಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡರೆ, ಅನಿಲ ಸೋರಿಕೆ ಇದೆ ಎಂದು ಅರ್ಥಮಾಡಿಕೊಳ್ಳಿ. ನೀರು ಸಂಪೂರ್ಣವಾಗಿ ಸ್ಥಿರವಾಗಿದ್ದರೆ ಮತ್ತು ಚಲಿಸದಿದ್ದರೆ, ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯ ಸಮಸ್ಯೆ ಇಲ್ಲ ಎಂದು ಅರ್ಥಮಾಡಿಕೊಳ್ಳಿ.
ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿದೆಯೇ ಎಂದು ಅದರ ವಾಸನೆಯನ್ನು ಪರಿಶೀಲಿಸಬಹುದು. ಎಲ್‌ಪಿಜಿ ಸಿಲಿಂಡರ್‌ಗೆ ಈಥೈಲ್ ಮೆರ್ಕಾಪ್ಟನ್ (ರಾಸಾಯನಿಕ) ಸೇರಿಸಲಾಗುತ್ತದೆ, ಇದು ಅನಿಲ ಸೋರಿಕೆ ಯಾದಾಗ ಕೊಳೆತ ಮೊಟ್ಟೆ, ಈರುಳ್ಳಿ ಅಥವಾ ಬೆಳ್ಳುಳ್ಳಿಯಂತಹ ವಾಸನೆಯನ್ನು ಉಂಟುಮಾಡುತ್ತದೆ. ಅಂತಹ ವಾಸನೆ ಬಂದರೆ, ಅದು ಅನಿಲ ಸೋರಿಕೆಯ ಸಂಕೇತವಾಗಿರ ಬಹುದು. ಸೋರಿಕೆಯಾಗುತ್ತಿರುವುದು ನಿಮಗೆ ತಿಳಿದರೆ, ನೀವು ತಕ್ಷಣ ಅದರ ನಿಯಂತ್ರಕವನ್ನು ಮುಚ್ಚಬೇಕು.
Comments are closed.