Home News Bengaluru : ಇತಿಹಾಸ ಪುಟ ಸೇರಿದ BBMP- ಇಂದಿನಿಂದ ‘ಗ್ರೇಟರ್ ಬೆಂಗಳೂರು’ ಆಡಳಿತ ಜಾರಿ !!

Bengaluru : ಇತಿಹಾಸ ಪುಟ ಸೇರಿದ BBMP- ಇಂದಿನಿಂದ ‘ಗ್ರೇಟರ್ ಬೆಂಗಳೂರು’ ಆಡಳಿತ ಜಾರಿ !!

Hindu neighbor gifts plot of land

Hindu neighbour gifts land to Muslim journalist

Bengaluru : ಕಳೆದ 70 ವರ್ಷಗಳಿಂದ ಮೇಯರ್ಗಳ ಆಡಳಿತ ಕಂಡಿದ್ದ ಬಿಬಿಎಂಪಿ ಇನ್ನು ಇತಿಹಾಸದ ಪುಟಗಳನ್ನು ಸೇರಿಕೊಳ್ಳಲಿದೆ. ಇಂದಿನಿಂದ ಅದರ ಬದಲಿಗೆ ಗ್ರೇಟರ್ ಬೆಂಗಳೂರು ತನ್ನ ಕಾರ್ಯವನ್ನು ಮುಂದುವರಿಸಲಿದೆ.

ಹೌದು,. ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು 5 ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಈ ನಗರ ಪಾಲಿಕೆಗಳ ಮೇಲೆ ನಿಗಾ ವಹಿಸಲು ಜಿಬಿಎ ರಚಿಸಲಾಗಿದ್ದು, ಮಂಗಳವಾರದಿಂದ ಬಿಬಿಎಂಪಿ ರದ್ದಾಗಿ ಜಿಬಿಎ ಆಡಳಿತ ಆರಂಭವಾಗಲಿದೆ. ಬೆಳೆಯುತ್ತಿರುವ ರಾಜಧಾನಿಯನ್ನು ಭಾಗಗಳಾಗಿ ವಿಂಗಡಿಸಿ ಆಡಳಿತ ನಡೆಸುವ ಗ್ರೇಟರ್ ಬೆಂಗಳೂರು ಅಥಾರಿಟಿ ಇಂದಿನಿಂದ ಜಾರಿಗೆ ಬರುತ್ತಿದ್ದು, ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಯಾಗುತ್ತಿದೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಕೂಡಾ ಬದಲಾಗಲಿದೆ. ಅದಕ್ಕೂ ಮುನ್ನ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ಕೈಗೊಳ್ಳಲಾಗುವ ಚುನಾವಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ 73 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಜಿಬಿಎಗೆ ಸದಸ್ಯರಾಗಿ ಬೆಂಗಳೂರಿನ ಮೂವರು ಸಂಸದರು, ಬೆಂಗಳೂರು ವ್ಯಾಪ್ತಿಯ ಶಾಸಕರನ್ನು ನೇಮಿಸಲಾಗಿದೆ.

ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ನಗರಪಾಲಿಕೆ ಸೇರಿ 5 ಪಾಲಿಕೆ ರಚನೆ ಮಾಡಲಾಗಿದ್ದು, ಸದ್ಯ ಇರುವ ವಾರ್ಡ್ ಗಳೇ ಜಿಬಿಎ ನಲ್ಲೂ ಮುಂದುವರೆಯಲಿವೆ.

RCB: ಅಭಿಮಾನಿಗಳಿಗಾಗಿ RCB ಯಿಂದ ವಿಶೇಷ ಪ್ರಣಾಳಿಕೆ ಬಿಡುಗಡೆ !!