Home News Old Bangalore: 1983 ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ?

Old Bangalore: 1983 ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Old Bangalore: ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿಯ ಐಟಿ ಉದ್ಯಮ, ಆಹಾರ ಸಂಸ್ಕೃತಿ, ಇಲ್ಲಿನ ಟ್ರಾಫಿಕ್, ದುಬಾರಿ ಜನಜೀವನ ಎಲ್ಲವೂ ಬೆಂಗಳೂರನ್ನು ಜಾಗತಿಕ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಆದರೆ ಬರೋಬ್ಬರಿ 42 ವರ್ಷಗಳ ಹಿಂದೆ ಅಂದರೆ 1983 ರಲ್ಲಿ ಬೆಂಗಳೂರು ಹೇಗಿತ್ತು ಅಂದ್ರೆ, ಬೆಂಗಳೂರಿನ ನಿವಾಸಿಯೊಬ್ಬರು ಹಂಚಿಕೊಂಡ 42 ವರ್ಷಗಳ ಹಳೆಯ ಬೆಂಗಳೂರಿನ(Old Bengaluru) ಅಪರೂಪದ ಮ್ಯಾಪ್ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದ್ರವೀಶ ಎಂಬ ಮಹಿಳೆಯೊಬ್ಬರು 1983 ರ ಅಂದರೆ 42 ವರ್ಷಗಳಷ್ಟು ಹಳೆಯ ಬೆಂಗಳೂರಿನ ಮ್ಯಾಪ್ ಅನ್ನು ತಮ್ಮ ಎಕ್ಸ್ ಹಂಚಿಕೊಂಡಿದ್ದಾರೆ. ಆಗಿನ ಕಾಲದ ಬೆಂಗಳೂರಿನ ನಕ್ಷೆಯಂತೆ ಈ ಮ್ಯಾಪ್‌ನಲ್ಲಿ ಹೆಚ್‌ಎಸ್‌ಆರ್ ಲೇಔಟ್ ಹಾಗೂ ಇಂದಿರಾನಗರ ಇರಲೇ ಇಲ್ಲ. (ಅವೆಲ್ಲವೂ ಕೆಲವು ದಶಕಗಳಿಗೆ ಹಿಂದಷ್ಟೇ ರೂಪುಗೊಂಡ ಬಡಾವಣೆಗಳಾಗಿವೆ) ಆಗ ಜಯನಗರವು ಬೆಂಗಳೂರು ನಗರದ ಕೇಂದ್ರವಾಗಿತ್ತು ಎಂದು ದ್ರವೀಶ ಹೇಳಿದ್ದಾರೆ. ಆದರೆ ಉತ್ತರದ ಭಾಗಗಳು ಮಾತ್ರ ಅರೆ ಗ್ರಾಮೀಣವಾಗಿದ್ದವು ಎಂದು ದ್ರವೀಶ ಬರೆದುಕೊಂಡಿದ್ದಾರೆ.

ಕೆಲವರು ಇದನ್ನು ದಕ್ಷಿಣ ಬೆಂಗಳೂರು ಎಂದು ಭಾವಿಸಿದ್ದಾರೆ. ಆದರೆ ಎಐ ನೆರವಿನಿಂದ ನೋಡಿದಾಗ ಆಗಿನ ಕಾಲದಲ್ಲಿ ಇಡೀ ಬೆಂಗಳೂರು ನಗರ ಕೇವಲ ಇಷ್ಟೇ ಪ್ರದೇಶಗಳಿಗೆ ಸೀಮಿತವಾಗಿದ್ದು ಖಚಿತವಾಗಿದೆ. ಈಗಿರುವ ಹೆಬ್ಬಾಳ, ಯಲಹಂಕ, ಬಳ್ಳಾರಿ ರಸ್ತೆ ಮುಂತಾದವುಗಳೆಲ್ಲಾ ಬೆಂಗಳೂರಿನ ಹೊರಭಾಗದಲಿರುವುದು ಸ್ಪಷ್ಟವಾಗಿದೆ.

Dangerous Tribe: ಭಾರತದಲ್ಲಿದೆ ಜಗತ್ತಲ್ಲೇ ಅತ್ಯಂತ ಡೇಂಜರಸ್ ಬುಡಕಟ್ಟು ಜಗನಾಂಗ !! ಇವ್ರನ್ನ ಸಂಪರ್ಕಿಸೋದನ್ನು ಭಾರತ ಸರ್ಕಾರವೇ ಕಾನೂನು ಬದ್ಧ ನಿಷೇಧಿಸಿದೆ!!