Actor Chikkanna: ಹಾಸ್ಯನಟ ಚಿಕ್ಕಣ್ಣ ಮದುವೆ ನಿಶ್ಚಯ: ಹುಡುಗಿ ಯಾರು ಗೊತ್ತೇ?

Actor Chikkanna: ಹಾಸ್ಯ ನಟ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಚಿಕ್ಕಣ್ಣ ಅವರು ಈಗಾಲೇ ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯನಟನಾಗಿ ಹೆಸರನ್ನು ಪಡೆದಿದ್ದು, ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಮದುವೆಯಾಗಲಿದ್ದಾರೆ.

ಚಿಕ್ಕಣ್ಣ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಪಾವನಾ. ಈಗಾಗಲೇ ಹೂ ಮುಡಿಸುವ ಶಾಸ್ತ್ರವನ್ನು ಎರಡು ಕುಟುಂಬಗಳು ಮಾಡಿದೆ. ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿಯಾಗಲಿದೆ.
Comments are closed.