Home News ಏ ಪ್ರತಾಪ ಸಿಂಹ, ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚ, ಅದ್ಕೆ ಬೂಕರ್ ಬಂತಾ? ಹೊಟ್ಟೆ ಕಿಚ್ಚು...

ಏ ಪ್ರತಾಪ ಸಿಂಹ, ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚ, ಅದ್ಕೆ ಬೂಕರ್ ಬಂತಾ? ಹೊಟ್ಟೆ ಕಿಚ್ಚು ಬೇಡ್ವೋ – ಎಚ್. ವಿಶ್ವನಾಥ್

Pratap Simha Vs Vishwanath

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಮೈಸೂರು ದಸರಾ ಉದ್ಘಾಟಿಸಲು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್’ರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯದ ಜತೆ ಧರ್ಮ ಅಧರ್ಮ ಬೆರೆಸಿಕೊಂಡು ರಾಡಿ ಎಬ್ಬಿಸುತ್ತಿವೆ.

ಭಾನು ಮುಷ್ತಾಕ್ ರನ್ನು ಆಯ್ಕೆ ಮಾಡಿದ ಈ ನಿರ್ಧಾರವನ್ನು ಸಮರ್ಥಿಸಿರುವ ಸಿಎಂ ಸಿದ್ದರಾಮಯ್ಯ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಮೈಸೂರಿನಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಮತ್ತು ಮಿರ್ಜಾ ಇಸ್ಮಾಯಿಲ್ ಮೈಸೂರಿನಲ್ಲಿ ದಿವಾನರಾಗಿದ್ದಾಗ ದಸರಾವನ್ನು ಆಚರಿಸಲಾಗುತ್ತಿತ್ತು. ನಾವೇ 2017 ರಲ್ಲಿ ಖ್ಯಾತ ಕವಿ ನಿಸಾರ್ ಅಹ್ಮದ್ ದಸರಾವನ್ನು ಉದ್ಘಾಟಿಸಲು ಆಹ್ವಾನಿಸಿ ಉದ್ಘಾಟಿಸಿದ್ದೆವು. ಈಗ ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದರೆ ತಪ್ಪೇನು?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಸಿದ್ಧ ಲೇಖಕ ಎಲ್ ಹನುಮಂತಯ್ಯರವರು ಕೂಡಾ ಈ ವಿವಾದದ ಬಗ್ಗೆ ಮಾತನಾಡಿ,ಇದು ಸಮಾಜಕ್ಕೆ ಹಾನಿಕಾರಕ ಎಂದಿದ್ದಾರೆ. ಮುಷ್ತಾಕ್‌ಗೆ ಬೆಂಬಲ ವ್ಯಕ್ತಪಡಿಸಿದ ಅವರು, “ಬಾನು ಮುಷ್ತಾಕ್ ಸಾಹಿತ್ಯ ನಮ್ಮ ಭೂಮಿಗೆ ಗೌರವ ತಂದಿದೆ. ಕೆಲವರು ದಸರಾ ಆಹ್ವಾನದ ಬಗ್ಗೆ ಅನಗತ್ಯ ವಿವಾದವನ್ನು ಹುಟ್ಟುಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ.

ಇನ್ನು ಬಾನು ಮುಷ್ತಾಕ್ ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವಿಗೆ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸ್ವಾಗತಿಸಿ, ಬೂಕರ್ ಬಾನು ಮುಷ್ತಾಕ್ ರಿಗೆ ಬಂದಿದೆ. ಪ್ರತಾಪಿಯಾಗಿ ಮಾತನಾಡುವ ಪ್ರತಾಪ್ ಸಿಂಹ, ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚಕ್ಕೆ ಬೂಕರ್ ಬಂತಾ? ಹೊಟ್ಟೆ ಕಿಚ್ಚಿಗೆ ಏನೇನೋ ಮಾತನಾಡುವುದಲ್ಲ. ನಿನ್ನ ಪ್ರತಾಪಕ್ಕೆ ಬಿಜೆಪಿ ಹೈಕಮಾಂಡ್ ಸೀಟೇ ಇಲ್ಲದ ಹಾಗೆ ಮಾಡಿದರು ಎಂದು ಮಾಜಿ ಸಂಸದ ಪ್ರತಾಪ್ ಅವರ ವಿರುದ್ಧ ಹರಿಹಾಯ್ದರು. ಬಾನು ಮುಷ್ತಾಕ್ ಕೃತಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ ದೀಪಾ ಬಸ್ತಿಗೂ ಬೂಕರ್ ಪ್ರಶಸ್ತಿ ನೀಡಲಾಗಿದೆ. ಇಬ್ಬರಿಗೂ ಸಮಾನವಾಗಿ ಬೂಕರ್ ಪ್ರಶಸ್ತಿ ನೀಡಲಾಗಿದೆ ಎಂದರು.

ಈ ಶೋಭಾ ಕರಂದ್ಲಾಜೆ ಭಾರತ ಸರಕಾರದ ಮಂತ್ರಿ. ಅವರು ಭಾನು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟವನ್ನು ನಿಮಗೆ ಬರೆದು ಕೊಟ್ಟವರು ಯಾರು? ಹೀಗೆ ಹೇಳಲು ಅಧಿಕಾರ ಕೊಟ್ಟವರು ಯಾರು? ಇದು ಜನರ ಪ್ರಭುತ್ವ, ಜಾತಿ ಪಂಥದ ಶರಾ ಇಲ್ಲಿ ಬರೆದಿಲ್ಲ. ಇದು ಎಲ್ಲರ ದಸರಾ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.