BANGALORE: ಬೆಂಗಳೂರಲ್ಲಿ ಕಸ ವಿಲೇವಾರಿ ಸಮಸ್ಯೆ! ಮುಷ್ಕರಕ್ಕೆ ಕರೆ?!

Share the Article

BANGALORE: ರಾಜಧಾನಿ ಬೆಂಗಳೂರಿನಲ್ಲಿ (Bangalore) ಮಳೆ ಮಧ್ಯೆ ಕಸದ ವಿಲೇವಾರಿ ಸಮಸ್ಯೆ ಶುರುವಾಗಿದೆ. ನಗರವಾಸಿಗಳು ಬಿಬಿಎಂಪಿ (BBMP) ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಳೆ ನಡುವೆಯೇ ಕಸವನ್ನ (Junk) ಡಂಪ್ ಮಾಡಲು ಹೋಗಿದ್ದ ಲಾರಿಗಳು ಗುಂಡಿಗಳಲ್ಲಿ ಹೋತು ಹೋಗಿದ್ದು, ನಾಲೈದು ದಿನಗಳಿಂದಲೂ ಕಸದ ಲಾರಿಗಳು ನಗರಕ್ಕೆ ವಾಪಾಸಾಗಿಲ್ಲ. ಹೀಗಾಗಿ ನಗರದೆಲ್ಲಡೆ ಕಸದ ಸಮಸ್ಯೆ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಇವೆಲ್ಲದುರ ಮಧ್ಯೆ ಬೆಂಗಳೂರಿಗೆ ಕಸದ ಶಾಕ್ ಎದುರಾಗಲಿದೆ. ಕಸದ ಲಾರಿ ಮತ್ತು ಆಟೋ ಟಿಪ್ಪರ್ ಚಾಲಕರು ಹಾಗೂ ಸಹಾಯಕರು ತಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಬಂದ್‌ ಮಾಡಲು ಮುಂದಾಗಿದ್ದಾರೆ. ಮುಂದಿನ ತಿಂಗಳಿನಿಂದಲೇ ಬಂದ್‌ ಮಾಡಲು ತೀರ್ಮಾನ ಮಾಡಿದ್ದಾರೆ. ಕಸ ವಿಲೇವಾರಿ ಮಾಡುವ ಆಟೋ ಮತ್ತು ಲಾರಿ ಚಾಲಕರು ಸೆಪ್ಟೆಂಬರ್ 15, 2025ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕಸ ವಿಲೇವಾರಿ ಮಾಡುವ ಕಾರ್ಮಿಕರ ಈ ಪ್ರತಿಭಟನೆಯಿಂದ ಸುಮಾರು 4,000 ಕಸದ ಆಟೋ ಟಿಪ್ಪರ್‌ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಒಟ್ಟಿನಲ್ಲಿ ಈ ಮುಷ್ಕರ ಬೆಂಗಳೂರಿನ ಕಸದ ವಿಲೇವಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ.

Comments are closed.