Air India Flight: ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ: ದೆಹಲಿಗೆ ಫ್ಲೈಟ್‌ ವಾಪಸ್‌

Share the Article

Air India Flight: ಇಂದೋರ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ (Air India Flight) ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವು ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನವು ಇಂದೋರ್‌ಗೆ ಹೊರಟಿತ್ತು. ಈ ವೇಳೆ ಫ್ಲೈಟ್‌ನ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ನಿಮಿಷ ವಿಮಾನ ಹಾರಾಟ ನಡೆಸಿದೆ. ಬೆಂಕಿ ಸೂಚನೆ ಸಿಕ್ಕ ಬೆನ್ನಲ್ಲೇ ವಿಮಾನ ದೆಹಲಿಗೆ ವಾಪಸ್‌ ಆಗಿದೆ.

A320 ನಿಯೋ ವಿಮಾನದ ಒಂದು ಎಂಜಿನ್ ಸ್ಥಗಿತಗೊಂಡಿದ್ದು, ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಏರ್ ಇಂಡಿಯಾ ತಿಳಿಸಿದೆ. ಬೆಳಗ್ಗೆ 6:15 ರ ಸುಮಾರಿಗೆ ವಿಮಾನವು ತುರ್ತು ಭೂಸ್ಪರ್ಶ ಮಾಡಿತು. 90 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿಸಿದೆ.

 

Comments are closed.