PM Modi: 7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಗೆ ಭೇಟಿ!

PM Modi: ಜಪಾನ್ (Japan) ಪ್ರವಾಸದ ಬಳಿಕ ಇದೀಗ ಪ್ರಧಾನಿ ಮೋದಿ (PM Modi) ಚೀನಾ (China) ಪ್ರವಾಸ ಕೈಗೊಂಡಿದ್ದು, ಟಿಯಾಂಜಿನ್‌ಗೆ (Tianjin) ತಲುಪಿದ್ದಾರೆ.

ಪ್ರಧಾನಿ ಮೋದಿ ಚೀನಾಗೆ 7 ವರ್ಷಗಳ ನಂತರ ಭೇಟಿ ನೀಡುತ್ತಿದ್ದು, ಇಂದಿನಿಂದ ಸೆ.1ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಶನಿವಾರ (ಆ.30) ಸಂಜೆ 5ರ ಸುಮಾರಿಗೆ ಟಿಯಾಂಜಿನ್‌ಗೆ ತಲುಪಿದ ಪ್ರಧಾನಿ ಮೋದಿಯನ್ನು ಅಲ್ಲಿನ ಭಾರತೀಯ ಸಮುದಾಯ ಪ್ರೀತಿಯಿಂದ ಬರಮಾಡಿಕೊಂಡಿತು.
ಇಂದು ಭಾನುವಾರ (ಆ.31) ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಈ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಹೆಚ್ಚುವರಿ ಆಮದು ಸುಂಕದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ರಷ್ಯಾ (Russia) ಅಧ್ಯಕ್ಷ ಪುಟಿನ್ (Putin) ಅವರನ್ನು ಭೇಟಿಯಾಗಲಿದ್ದಾರೆ.
Comments are closed.