Madikeri: ಕೊಡಗಿನಲ್ಲಿ ಯುವತಿಯರು, ಆಂಟಿಯರು ಸಿಕ್ತಾರೆ, ಕರೆ ಮಾಡಿ ಎಂಬ ಅಪ್ರಪಚಾರ ಪ್ರಕರಣ: ಆರೋಪಿ ಅರೆಸ್ಟ್

Madikeri: ಕೊಡಗು (Kodagu) ಜಿಲ್ಲೆಯಲ್ಲಿ ಡೇಟಿಂಗ್ ಮಾಡಲು ಯುವತಿಯರು, ಆಂಟಿಯರು ಸಿಗುತ್ತಾರೆ, ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಅಪಪ್ರಚಾರ ಮಾಡಿದ್ದ ಕಿಡಿಗೇಡಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ನಾಗಪ್ಪ ಹನುಮಂತ ಲಮಾಣಿ (26) ಬಂಧಿತ ಆರೋಪಿ.
ಮಡಿಕೇರಿ (Madikeri) ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಿಡಿಯೋ ಬಳಸಿ ಡೇಟಿಂಗ್ ಮಾಡಲು ಯುವತಿಯರು, ಆಂಟಿಯರು ಸಿಗುತ್ತಾರೆ, ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಮೊಬೈಲ್ ಸಂಖ್ಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಪೊಲೀಸರು ಇದೀಗ ಈ ಆರೋಪದಲ್ಲಿ ಪೊಲೀಸರು ಈತನ ಬಂಧನ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ : ರಿಯಾಸಿ, ರಾಂಬನ್‌ನಲ್ಲಿ 11 ಮಂದಿ ಸಾವು – ಜನಜೀವನ ಅಸ್ತವ್ಯಸ್ತ
Comments are closed.