ಆಟೋ ಚಾಲಕನಿಂದ ಐದು ಲಕ್ಷ ರೂ. ವಂಚನೆ: ಮಹಿಳೆ ಆತ್ಮಹತ್ಯೆ

Share the Article

ಮೂಡುಬಿದಿರೆ: 3 ಲಕ್ಷ ಮೌಲ್ಯದ ಚಿನ್ನ, ನಗದು ರೂಪದಲ್ಲಿ ನೀಡಿದ ಹಣವನ್ನು ಹಿಂದೆ ನೀಡದೆ ಇರುವುದರಿಂದ ಮನನೊಂದು ತೋಡಾರಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.

ಶಫ್ರೀನಾ ಬಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅಶ್ರಫ್‌ ಎಂಬಾತ ಆರೋಪಿ.

ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ತೋಡಾರು ಗ್ರಾಮದ ಏರ್‌ ಇಂಡಿಯಾ ಅಪಾರ್ಟ್ಮೆಂಟ್‌ನಲ್ಲಿ ನವಾಝ್‌-ಶಫ್ರೀನಾ ಬಾನು (31) ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಈತ ಇವರಿಗೆ ಪರಿಚಿತನಾಗಿದ್ದು, ಕಳೆದ 7 ತಿಂಗಳ ಹಿಂದೆ ನವಾಝ್‌ ಪತ್ನಿಯಿಂದ ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಮೌಲ್ಯದ ಬಂಗಾರ ಪಡೆದಿದ್ದ.

ಶಫೀನಾ ಅವರು ಅಶ್ರಫ್‌ ನಲ್ಲಿ ಪದೇ ಪದೇ ಹಣ ಕೇಳಿದರೂ ಉಡಾಫೆ ಉತ್ತರ ನೀಡುತ್ತಿದ್ದ. ಶಫೀನಾ ಬಾನು ಅವರು ಫೋನ್‌ ಕರೆ ಮಾಡಿ ಈ ಕುರಿತು ಮತ್ತೆ ವಿಚಾರಿಸಿದಾಗ ನನಗೆ ಇನ್ನೂ ಕಾಲಾವಕಾಶ ಬೇಕು, ಇಲ್ಲದಿದ್ದರೆ ನೀನು ಒಡವೆ ನೀಡಿದ್ದಕ್ಕೆ ಏನು ಫ್ರೂಫ್‌ ಇದೆ ಎಂದು ಉಡಾಫೆಯಾಗಿ ಹೇಳಿದ್ದಾನೆ.

ಈತನ ದುಪ್ರೇರಣೆಯಿಂದ ಶಫೀನಾ ಬಾನು ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಹಿಳೆಯ ಪತಿ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು, ತನಿಖೆ ನಡೆಯುತ್ತಿದೆ.

Comments are closed.